ಟೈಪಿಂಗ್ ಮಾಡುವ ತಲೆನೋವೇ ಇಲ್ಲದೇ ಮೆಸೇಜ್ ಕಳುಹಿಸುವ ಅವಕಾಶವನ್ನು ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ತನ್ನ ಬಳಕೆದಾರರಿಗೆ ಮಾಡಿಕೊಡುತ್ತಿದೆ. ಡಿಜಿಟಲ್ ಅಸಿಸ್ಟೆಂಟ್ ಸಹಾಯದಿಂದ ನೀವೀಗ ವಾಟ್ಸಾಪ್‌ನಲ್ಲಿ ಮೆಸೇಜ್ ಕಂಟೆಂಟ್ ಸೃಷ್ಟಿಸಬಹುದಾಗಿದೆ.
ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಅಸೆಸ್ಟೆಂಟ್ ಮೂಲಕ ಮೆಸೇಜ್ ಕಳುಹಿಸಬಹುದಾಗಿದೆ. ಐಒಎಸ್ ಬಳಕೆದಾರರು ಸಿರಿ ನೆರವಿನಿಂದ ವಾಟ್ಸಾಪ್ ಸಂದೇಶಗಳನ್ನು ಕಳುಹಿಸಬಹುದಾಗಿದೆ. ನೀವು ಕೆಲಸದಲ್ಲಿ ಬಹಳ ನಿರತರಾಗಿದ್ದ ವೇಳೆ ಈ ಅಸಿಸ್ಟೆಂಟ್‌ಗಳು ನಿಮ್ಮ ನೆರವಿಗೆ ಬರಲಿವೆ.
ನಿಮ್ಮ ಮೆಸೇಜ್‌ಗಳನ್ನು ಆಲಿಸಲು ಗೂಗಲ್ ಅಸಿಸ್ಟೆಂಟ್‌ಗೆ ನಿಮ್ಮ ನೋಟಿಫಿಕೇಶನ್‌ಗಳನ್ನು ಅಕ್ಸೆಸ್ ಮಾಡಲು ಅನುಮತಿ ನೀಡಬೇಕಾಗುತ್ತದೆ. ಇದನ್ನು ಸೆಟ್ಟಿಂಗ್ಸ್‌ಗೆ ಹೋಗಿ ಮಾಡಬಹುದಾಗಿದೆ.