ದೇಶದಲ್ಲಿ ವಾಟ್ಸಾಪ್ ಬಳಕೆದಾರರ ಸಂಖ್ಯೆ ಸಾಕಷ್ಟಿದೆ. ವಾಟ್ಸಾಪ್ ಬಳಸದೆ ಬೆಳಗಾಗೋದೇ ಇಲ್ಲ ಎನ್ನುವವರಿದ್ದಾರೆ. ಫೇಸ್ಬುಕ್ ಒಡೆತನದ ಸಂದೇಶ ವೇದಿಕೆ ವಾಟ್ಸಾಪ್, ತನ್ನ ಬಳಕೆದಾರರಿಗೆ ಬೇಸರದ ಸುದ್ದಿ ನೀಡಿದೆ. ಕೆಲವು ಹಳೆಯ ಆಂಡ್ರಾಯ್ಡ್ ಮತ್ತು ಐಫೋನ್ ಮಾದರಿಗಳಲ್ಲಿ ವಾಟ್ಸಾಪ್ ಕೆಲಸ ಮಾಡುವುದಿಲ್ಲವೆಂದು ಕಂಪನಿ ಹೇಳಿದೆ.
ವಾಟ್ಸಾಪ್ ಈ ಹಿಂದೆ ಹಳೆಯ ಮಾದರಿಗಳು ಮತ್ತು ಓಎಸ್‌ನಲ್ಲಿ ವಾಟ್ಸಾಪ್ ಸೇವೆ ನಿಲ್ಲಿಸಿದೆ. ಕಂಪನಿ ಮತ್ತೆ ಕೆಲ ಮಾಡೆಲ್ ಗಳಿಗೆ ವಾಟ್ಸಾಪ್ ಸೇವೆ ನಿಲ್ಲಿಸಲು ಮುಂದಾಗಿದೆ. ಉತ್ತಮ ಅನುಭವಕ್ಕಾಗಿ, ಇತ್ತೀಚೆಗೆ ಬಿಡುಗಡೆಯಾದ ಆಂಡ್ರಾಯ್ಡ್ ಅಥವಾ ಐಒಎಸ್ ನ ಆವೃತ್ತಿ ಬಳಸಿ ಎಂದು ಕಂಪನಿ ಶಿಫಾರಸ್ಸು ಮಾಡಿದೆ.
ಫೋನ್‌ನ ಒಎಸ್ ಆವೃತ್ತಿಯನ್ನು ಪರೀಕ್ಷಿಸಲು, ಸೆಟ್ಟಿಂಗ್‌ಗಳ ಮೆನುವಿನಲ್ಲಿ ಅಬೌಟ್ ಸೆಕ್ಷನ್ ಗೆ ಹೋಗಿ. ಅಲ್ಲಿ ಸಾಫ್ಟ್ ವೇರ್ ಆವೃತ್ತಿಯನ್ನು ಪರಿಶೀಲಿಸಬೇಕು. ಐಒಎಸ್ 10 ಹಾಗೂ ಅದ್ರ ಹಳೆ ಐಫೋನ್ ನಲ್ಲಿ ವಾಟ್ಸಾಪ್ ಕೆಲಸ ಮಾಡುವುದಿಲ್ಲ.
ಆಂಡ್ರಾಯ್ಡ್ 4.0.4 ಅಥವಾ ಅದಕ್ಕಿಂತ ಹಳೆಯದಾದ ಎಲ್ಲಾ ಆಂಡ್ರಾಯ್ಡ್ ಫೋನ್‌ಗಳು ಮತ್ತು KaiOS 2.5.0 ಮತ್ತು ಅದಕ್ಕಿಂತ ಹಳೆಯದಾದ ಎಲ್ಲಾ ಫೋನ್‌ಗಳಲ್ಲಿ ವಾಟ್ಸಾಪ್ ಕೆಲಸ ನಿಲ್ಲಿಸಲಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್‌ಐಐ, ಗ್ಯಾಲಕ್ಸಿ ಎಸ್ 3 ಮಿನಿ, ಆಪ್ಟಿಮಸ್ ಎಲ್ 5 ಡ್ಯುಯಲ್, ಆಪ್ಟಿಮಸ್ ಎಲ್ 4 II ಡ್ಯುಯಲ್, ಆಪ್ಟಿಮಸ್ ಎಫ್ 7, ಆಪ್ಟಿಮಸ್ ಎಫ್ 5 ಸೇರಿದಂತೆ ಆಂಡ್ರಾಯ್ಡ್ ಫೋನ್‌ಗಳು ನವೆಂಬರ್ 1, 2021 ರಿಂದ ವಾಟ್ಸಾಪ್ ನಿಲ್ಲಿಸಲಿವೆ.