ವಾಟ್ಸಾಪ್ ಕಳೆದ ತಿಂಗಳು ಯುಪಿಐ ಆಧಾರಿತ ಪಾವತಿ ಸೇವೆಗಾಗಿ ಕ್ಯಾಶ್ ಬ್ಯಾಕ್ ಪರೀಕ್ಷಿಸಲು ಪ್ರಾರಂಭಿಸಿತ್ತು. ವಾಟ್ಸಾಪ್ ಈಗ ಆಂಡ್ರಾಯ್ಡ್ ಬೀಟಾ ಬಳಕೆದಾರರಿಗಾಗಿ ಈ ವೈಶಿಷ್ಟ್ಯವನ್ನು ನೀಡ್ತಿದೆ. ವಾಟ್ಸಾಪ್ ಈ ಮೂಲಕ ಫೋನ್ ಪೇ, ಗೂಗಲ್ ಪೇ ಗೆ ಟಕ್ಕರ್ ನೀಡ್ತಿದೆ.
ಆಂಡ್ರಾಯ್ಡ್ ನ ವಾಟ್ಸಾಪ್ ಬೀಟಾ ಅಪ್ಲಿಕೇಶನ್ ಮೇಲ್ಭಾಗದಲ್ಲಿ ಇದ್ರ ಬಗ್ಗೆ ಆಯ್ಕೆಯಿದೆ. ನಗದು ನೀಡಿ 51 ರೂಪಾಯಿ ಪಡೆಯಿರಿ ಎಂದು ಬರೆಯಲಾಗಿದೆ. ಇದ್ರಲ್ಲಿ ಹಣ ವಹಿವಾಟು ನಡೆಸಿ 51 ರೂಪಾಯಿವರೆಗೆ ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ.
ಹಣ ಪಾವತಿ ಮಾಡಿದ ತಕ್ಷಣ ಖಾತೆಗೆ 51 ರೂಪಾಯಿ ಕ್ಯಾಶ್ ಬ್ಯಾಕ್ ಬರುತ್ತದೆ. ಕ್ಯಾಶ್ ಬ್ಯಾಕ್ ಗ್ರಾಹಕರಿಗೆ ಸಿಗಲಿದೆ. ಆದ್ರೆ ಐದು ಬಾರಿ ಮಾತ್ರ ಕ್ಯಾಶ್ ಬ್ಯಾಕ್ ಗ್ರಾಹಕರಿಗೆ ಸಿಗಲಿದೆ. ಈ ವೈಶಿಷ್ಟ್ಯವು ಆಂಡ್ರಾಯ್ಡ್ ಬೀಟಾ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಇದು ಲಭ್ಯವಾಗಲಿದೆ. ಗೂಗಲ್ ಪೇ ಕೂಡ ಇದೇ ರೀತಿಯ ಆಫರ್ ನೀಡಿತ್ತು. ಸ್ಕ್ರ್ಯಾಚ್ ಕಾರ್ಡ್ ಮೂಲಕ 1,000 ರೂಪಾಯಿ ಕ್ಯಾಶ್ ಬ್ಯಾಕ್ ನೀಡಿತ್ತು.