ಈಗಾಗಲೇ ಹಣವನ್ನು ಡಿಜಿಟಲ್ ಮಾಧ್ಯಮದ ಮೂಲಕ ಕಳುಹಿಸುವುದರಲ್ಲಿ ಯುಪಿಐ ಅಗ್ರಸ್ಥಾನ ಪಡೆದಿದ್ದು ಪೇಟಿಎಂ, ಫೋನ್‌ಪೇ, ಗೂಗಲ್ ಪೇ ಆ್ಯಪ್‌ಗಳು ಭಾರಿ ಕೊಡುಗೆಗಳು, ಕ್ಯಾಷ್‌ಬ್ಯಾಕ್ ಆಕರ್ಷಣೆಗಳಿಂದ ತಮ್ಮದೇ ಗ್ರಾಹಕರ ಸಾಮ್ರಾಜ್ಯ ಕಟ್ಟಿಕೊಂಡಿವೆ.
ಕೆಲವೇ ತಿಂಗಳ ಮುನ್ನ ಇದೇ ಕ್ಷೇತ್ರಕ್ಕೆ ಕಾಲಿರಿಸಿರುವ ಫೇಸ್‌ಬುಕ್ ಒಡೆತನದ ಇನ್‌ಸ್ಟೆಂಟ್ ಮೆಸೇಜಿಂಗ್ ವೇದಿಕೆ ’ವಾಟ್ಸಾಪ್’ ಕೂಡ ಮುಂದಿನ ದಿನಗಳಲ್ಲಿ ತನ್ನ ಪೇಮೆಂಟ್ಸ್ ಸೌಲಭ್ಯ ಬಳಸುವ ಗ್ರಾಹಕರಿಗೆ ಕ್ಯಾಷ್ ಬ್ಯಾಕ್ ನೀಡುವ ಸಿದ್ಧತೆ ನಡೆಸಿದೆ. ಪ್ರತಿಸ್ಪರ್ಧಿಗಳನ್ನು ಮಣಿಸಲು ಈ ಕ್ಯಾಷ್‌ಬ್ಯಾಕ್ ತಂತ್ರದ ಪ್ರಯೋಗ ನಡೆಯಲಿದೆ.
BIG BREAKING: ಒಂದೇ ದಿನದಲ್ಲಿ 28,326 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ; ದೇಶದಲ್ಲಿದೆ ಇನ್ನೂ 3,03,476 ಸಕ್ರಿಯ ಪ್ರಕರಣ
ಈಗಾಗಲೇ ವಾಟ್ಸಾಪ್ ಪೇಮೆಂಟ್ಸ್ ಬಳಸುತ್ತಿರುವವರಿಗೆ ಹೊಸ ಆಫರ್ ಸಿಗುವುದು ಡೌಟು. ಹೊಸ ಗ್ರಾಹಕರನ್ನು ಸೆಳೆಯಲು, ಒಂದೇ ಒಂದು ಬಾರಿಯೂ ಪೇಮೆಂಟ್ಸ್ ಬಳಸದವರಿಗೆ ಕ್ಯಾಷ್ ಬ್ಯಾಕ್ ಆಮಿಷವನ್ನು ಕಂಪನಿ ಒಡ್ಡುವ ನಿರೀಕ್ಷೆಯಿದೆ.
ಒಟ್ಟಾರೆ ದೇಶದ 227 ಬ್ಯಾಂಕ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ವಾಟ್ಸಾಪ್, ಭಾರತೀಯ ರಾಷ್ಟ್ರೀಯ ಪಾವತಿಗಳ ಮಂಡಳಿ (ಎನ್‌ಪಿಸಿಐ) ಮೂಲಕ ಹಣಕಾಸು ವಹಿವಾಟು ನಡೆಸಲು ಡಿಜಿಟಲ್ ವೇದಿಕೆ ರೂಪಿಸುವ ಅನುಮತಿ ಗಿಟ್ಟಿಸಿದೆ. ಒಂದು ಬಾರಿ ಪೇಮೆಂಟ್ಸ್‌ನಲ್ಲಿ, ಮತ್ತೊಬ್ಬರಿಗೆ ಹಣ ಕಳುಹಿಸಿದರೆ ಕನಿಷ್ಠ 10 ರೂ.ವರೆಗೆ ಕ್ಯಾಷ್‌ಬ್ಯಾಕ್ ನೀಡಲಾಗುವುದು ಎಂದು ಕಂಪನಿಯ ಮೂಲಗಳು ತಿಳಿಸಿವೆ.