alex Certify ವಾಟ್ಸಾಪ್​ ಪೇ ಮೂಲಕ ನೀವು ಗಳಿಸಬಹುದು 255 ರೂಪಾಯಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್​ ಪೇ ಮೂಲಕ ನೀವು ಗಳಿಸಬಹುದು 255 ರೂಪಾಯಿ…..!

ವಾಟ್ಸಾಪ್​ ಚಾಟ್​ನಲ್ಲಿ ಕ್ಯಾಮೆರಾ ಐಕಾನ್​ ಪಕ್ಕದಲ್ಲೇ ರೂಪಾಯಿ ಐಕಾನ್​ ಇರಿಸಿದ ವಾಟ್ಸಾಪ್​ ಕಂಪನಿಯು ಇದೀಗ ತನ್ನ ಬಳಕೆದಾರರ ವಹಿವಾಟುಗಳಿಗೆ 51 ರೂಪಾಯಿಗಳ ಕೊಡುಗೆಯನ್ನು ನೀಡಲು ಮುಂದಾಗಿದೆ. ಈ ಮೂಲಕ ವಾಟ್ಸಾಪ್​ನಲ್ಲೇ ಬಳಕೆದಾರರು ವ್ಯವಹಾರ ನಡೆಸಬೇಕು ಎಂದು ಪ್ರೋತ್ಸಾಹಿಸುತ್ತಿದೆ. ಗೂಗಲ್​ ಪೇ ಹಾಗೂ ಫೋನ್​​ ಪೇನಂತಹ ಅಪ್ಲಿಕೇಶನ್​​ಗಳಿಗೆ ಸೆಡ್ಡು ಹೊಡೆಯಲು ಮುಂದಾಗಿರುವ ವಾಟ್ಸಾಪ್​​ ಗ್ರಾಹಕರನ್ನು ಸೆಳೆಯಲು ಈ ಪ್ಲಾನ್​ ರೂಪಿಸಿದೆ.

ವಾಟ್ಸಾಪ್​​ ಪೇ ಎನ್ನುವುದು ಸುಲಭವಾಗಿ ಬಳಕೆ ಮಾಡಬಹುದಾದ ವೈಶಿಷ್ಟ್ಯವಾಗಿದ್ದು ಇದರ ಮೂಲಕ ಬಳಕೆದಾರರು ಹಣವನ್ನು ಸ್ವೀಕರಿಸಬಹುದು ಹಾಗೂ ಕಳುಹಿಸಬಹುದಾಗಿದೆ. ಇದೊಂದು ಯುಪಿಐ ಆಧರಿತ ವಹಿವಾಟಾಗಿದೆ. ವಾಟ್ಸಾಪ್​ ಪೇ ಮೂಲಕ ಕಳುಹಿಸಿದ ಹಣವು ನೇರವಾಗಿ ನೀವು ಲಿಂಕ್​ ಮಾಡಿದ ಬ್ಯಾಂಕ್​ ಖಾತೆಗೆ ಜಮೆ ಆಗಲಿದೆ.

ವಾಟ್ಸಾಪ್​​ ಪೇಗೆ ಪ್ರಚಾರ ನೀಡಲು ಮುಂದಾಗಿರುವ ಕಂಪನಿಯು ಬಳಕೆದಾರರ ವ್ಯವಹಾರಗಳಿಗೆ 51 ರೂಪಾಯಿ ಕ್ಯಾಶ್​ಬ್ಯಾಕ್​ ನೀಡುತ್ತಿದೆ. ಈ ಆಫರ್​ನ ಅವಧಿಯಲ್ಲಿ ನೀವು ಮಾಡಿದ ವಹಿವಾಟುಗಳಿಗೆ 51 ರೂಪಾಯಿ ಸಿಗಲಿದೆ. ಈ ಆಫರ್​ನ್ನು ಪಡೆಯಲು ನೀವು ಬೇರೆಯವರಿಗೆ ಇಂತಿಷ್ಟೇ ಹಣ ಕಳುಹಿಸಬೇಕು ಎಂಬ ಷರತ್ತು ಇರೋದಿಲ್ಲ. ಇದಕ್ಕಾಗಿ ನೀವು ವಾಟ್ಸಾಪ್​ ಪೇ ಸೌಲಭ್ಯವನ್ನು ಹೊಂದಿದ್ದರಷ್ಟೇ ಸಾಕು.

ವಾಟ್ಸಾಪ್​​ ಪೇ ಕ್ಯಾಶ್​ಬ್ಯಾಕ್​ ಪಡೆಯಲು ಇರುವ ಷರತ್ತುಗಳು
ಹಣ ಕಳುಹಿಸುವವರು ಹಾಗೂ ಪಡೆಯವವರು ಕಡ್ಡಾಯವಾಗಿ ವಾಟ್ಸಾಪ್​ ಪೇನಲ್ಲಿ ನೊಂದಣಿಯಾಗಿರಬೇಕು.
ವಾಟ್ಸಾಪ್​ ಖಾತೆ ಕನಿಷ್ಟ 30 ದಿನ ಹಳೆಯದಾಗಿರಬೇಕು.
ವಾಟ್ಸಾಪ್​ ಬ್ಯುಸಿನೆಸ್​ ಖಾತೆ ಹೊಂದಿರುವವರಿಗೆ ಈ ಸೌಲಭ್ಯ ಲಭ್ಯವಿಲ್ಲ.

ವಾಟ್ಸಾಪ್​ನ ಇತ್ತೀಚಿನ ವರ್ಷನ್​ ಹೊಂದಿರುವವರಿಗೆ ಮಾತ್ರ ಈ ಆಫರ್​ ಇರಲಿದೆ.

ಈ ಆಫರ್​ ಮೂಲಕ ನೀವು ಗರಿಷ್ಟ 5 ಬಾರಿ ಅಂದರೆ ಒಟ್ಟು 255 ರೂಪಾಯಿಗಳನ್ನು ಗಳಿಸಬಹುದಾಗಿದೆ.
ಐವರು ಬೇರೆ ಬೇರೆ ವಾಟ್ಸಾಪ್​ ಪೇ ಬಳಕೆದಾರರಿಗೆ ನೀವು ಹಣ ಕಳುಹಿಸಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...