ಇನ್ಸ್ಟಂಟ್ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ತನ್ನ ಬೀಟಾ ಬಳಕೆದಾರರಿಗೆ ತಮ್ಮ ಖಾತೆಗಳನ್ನು ಮತ್ತೊಂದು ಹ್ಯಾಂಡ್ಸೆಟ್ ಮತ್ತು ಆಂಡ್ರಾಯ್ಡ್ ಟ್ಯಾಬ್ಲೆಟ್ನೊಂದಿಗೆ ಸಂಪರ್ಕಿಸಲು ಅನುಮತಿಸುವ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದರ ಮೂಲಕ ವಾಟ್ಸಾಪ್ ಬಳಕೆದಾರರು ತಮ್ಮ ಪ್ರಾಥಮಿಕ ಖಾತೆಗೆ ನಾಲ್ಕು ಆ್ಯಂಡ್ರಾಯ್ಡ್ ಹ್ಯಾಂಡ್ಸೆಟ್ಗಳವರೆಗೆ ಲಿಂಕ್ ಮಾಡಬಹುದು.
ನೋಂದಣಿ ಸ್ಕ್ರೀನ್ನಲ್ಲಿನ ಸೆಟ್ಟಿಂಗ್ಗಳ ಮೆನುವಿನಲ್ಲಿರುವ ಡ್ರಾಪ್ಡೌನ್ ಮೆನುವಿನಿಂದ ‘ಲಿಂಕ್ ಎ ಡಿವೈಸ್’ ಆಯ್ಕೆ ಮಾಡುವ ಮೂಲಕ ಈಗ ಕಂಪ್ಯಾನಿಯನ್ ಮೋಡ್ ಅನ್ನು ಸಕ್ರಿಯಗೊಳಿಸಬಹುದು. ಈ ವೈಶಿಷ್ಟ್ಯವನ್ನು ಇದೀಗ ಸದ್ಯ ಬೀಟಾ ಬಳಕೆದಾರರಿಗೆ ಮಾತ್ರ ಹೊರತರಲಾಗಿದ್ದು, ಇತರ ಬಳಕೆದಾರರಿಗೂ ಶೀಘ್ರದಲ್ಲಿ ಸಿಗಲಿದೆ.
ಪ್ರಸ್ತುತ ವಾಟ್ಸಾಪ್ ಬಳಕೆದಾರರು ತಮ್ಮ ಅಸ್ತಿತ್ವದಲ್ಲಿರುವ ಖಾತೆಯನ್ನು ಒಂದು ಸ್ಮಾರ್ಟ್ಫೋನ್ನಲ್ಲಿ ಮಾತ್ರ ಪ್ರವೇಶಿಸಬಹುದು. ಆದರೆ ಲ್ಯಾಪ್ಟಾಪ್ಗಳು ಮತ್ತು ಟ್ಯಾಬ್ಲೆಟ್ಗಳಂತಹ ಇತರ ನಾಲ್ಕು ಸಾಧನಗಳಿಗೆ ಲಿಂಕ್ ಮಾಡಲು ಅವರಿಗೆ ಅನುಮತಿಸಲಾಗಿದೆ. ಹೊಸ ಸೇವೆಯೊಂದಿಗೆ ಜನರು ಎರಡು ಫೋನ್ಗಳಲ್ಲಿ ಒಂದು ವಾಟ್ಸಾಪ್ ಸಂಖ್ಯೆಗೆ ಲಾಗ್ ಇನ್ ಮಾಡಬಹುದು.