ತನ್ನ ಬಳಕೆದಾರರಿಗೆ ಖಾಸಗಿತನ ಖಾತ್ರಿ ಪಡಿಸುವ ಅನೇಕ ಸೆಟ್ಟಿಂಗ್ ಗಳನ್ನು ಪರಿಷ್ಕರಿಸುತ್ತಿರುವ ವಾಟ್ಸಾಪ್ ಈ ಸಂಬಂಧ ಹೊಸದೊಂದು ಅಪ್ಡೇಟ್ ಮೇಲೆ ಕೆಲಸ ಮಾಡುತ್ತಿದೆ.
ಲಾಸ್ಟ್ ಸೀನ್, ಪ್ರೊಫೈಲ್ ಫೋಟೋ ಮತ್ತು ಅಬೌಟ್ ಸ್ಟೇಟಸ್‌ಗಳನ್ನು ತಮ್ಮ ಸಂಪರ್ಕ ಪಟ್ಟಿಯಲ್ಲಿರುವ ಕೆಲ ಮಂದಿ ನೋಡದೇ ಇರದಂತೆ ಮಾಡಲು ಬಳಕೆದಾರರಿಗೆ ಸೆಟ್ಟಿಂಗ್‌ನಲ್ಲಿ ಪರಿಷ್ಕರಣೆ ಮಾಡಲಾಗುತ್ತಿದೆ.
BIG NEWS: ಗಣೇಶೋತ್ಸವಕ್ಕೆ ಹೊಸ ಗೈಡ್ ಲೈನ್; 5 ದಿನದ ಬದಲು 3 ದಿನಕ್ಕೆ ಸೀಮಿತ; ಷರತ್ತಿನ ಮೇಲೆ ಷರತ್ತು ಹಾಕಿದ ಬಿಬಿಎಂಪಿ
ಇದೇ ವೇಳೆ ವಾಟ್ಸಾಪ್‌ನಲ್ಲಿ ತಾವು ಕಡೆಯ ಬಾರಿ ಯಾವಾಗ ಸಕ್ರಿಯರಾಗಿದ್ದರು ಎಂಬ ವಿಚಾರವಾಗಲೀ, ಪ್ರೊಫೈಲ್ ಚಿತ್ರವಾಗಲೀ ತಮ್ಮ ಹಾಲಿ ’ಅಬೌಟ್’ ಸ್ಟೇಟಸ್ ಅನ್ನು ನಿರ್ದಿಷ್ಟ ಕಾಂಟಾಕ್ಟ್‌ಗಳಿಂದ ಹೈಡ್ ಮಾಡುವ ಆಯ್ಕೆಯನ್ನು ಈ ಅಪ್ಡೇಟ್ ಕೊಡಮಾಡಲಿದೆ.
ಮೇಲ್ಕಂಡ ಅಪ್ಡೇಟ್‌ಗಳನ್ನು ಯಾರೆಲ್ಲಾ ನೋಡಬಹುದು ಎಂದು ನಿರ್ಧರಿಸಲು ಇರುವ ಮೂರು ಆಯ್ಕೆಗಳೊಂದಿಗೆ ಹೊಸದಾಗಿ, “My Contacts Except…..’ಅನ್ನು ಸೇರಿಸಲು ಆಂಡ್ರಾಯ್ಡ್ ಹಾಗೂ ಐಓಎಸ್‌ಗಳಲ್ಲಿರುವ ತನ್ನ ಬಳಕೆದಾರರಿಗೆ ವಾಟ್ಸಾಪ್ ಕೊಡಮಾಡಲಿದೆ.