ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್, ಎಲ್ಲರಿಗೂ ಅಳಿಸಿ (ಡಿಲೀಟ್ ಫಾರ್ ಎವ್ರೀವನ್) ಫೀಚರ್‌ನ ಸಮಯ ಮಿತಿಯನ್ನು ವಿಸ್ತರಿಸಲು ಯೋಜಿಸಿದೆ ಎನ್ನಲಾಗಿದೆ.
2017 ರಲ್ಲಿ ಎಲ್ಲರಿಗೂ ಅಳಿಸಿ (ಡಿಲೀಟ್ ಫಾರ್ ಎವ್ರೀವನ್) ಆಯ್ಕೆಯನ್ನು ಹೊರತರಲಾಗಿತ್ತು. ಆರಂಭದಲ್ಲಿ ಇದು ಏಳು ಸೆಕೆಂಡುಗಳ ಸಮಯದ ಮಿತಿ ಹೊಂದಿತ್ತು. ನಂತರ 2018ರಲ್ಲಿ ಈ ಫೀಚರ್ ಅನ್ನು 4,096 ಸೆಕೆಂಡುಗಳಿಗೆ ವಿಸ್ತರಿಸಲಾಯಿತು. ಇದೀಗ ಈ ಸಮಯದ ಮಿತಿಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು WaBetaInfo ವರದಿಯಲ್ಲಿ ಹೇಳಲಾಗಿದೆ.
WaBetaInfo ವರದಿಯಲ್ಲಿ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದೆ. ಅದರಲ್ಲಿ ಮೂರು ತಿಂಗಳ ಹಿಂದಿನ ಸಂದೇಶವು ಇನ್ನೂ ಅಳಿಸಲು ಅರ್ಹವಾಗಿದೆ ಎಂದು ತೋರಿಸುತ್ತದೆ. ಐಒಎಸ್ ಗಾಗಿ ವಾಟ್ಸಾಪ್ ಬೀಟಾ (v2.21.220.15) ಹೊಸ ವಿಡಿಯೋ ಪ್ಲೇಬ್ಯಾಕ್ ಇಂಟರ್ಫೇಸ್ ಅನ್ನು ಪಡೆಯುತ್ತಿದೆ ಎಂದು ಕೂಡ ಹೇಳಲಾಗಿದೆ. ಇದರಲ್ಲಿ ಬಳಕೆದಾರರು ವಿಡಿಯೋವನ್ನು ಪೂರ್ಣಪರದೆಯಲ್ಲಿ ವೀಕ್ಷಿಸಲು ಸಾಧ್ಯವಾಗುತ್ತದೆ
ಇತ್ತೀಚೆಗೆ, ವಾಟ್ಸಾಪ್ ಸಂಸ್ಥೆಯು ಜಾಗತಿಕವಾಗಿ ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಚಾಟ್ ಬ್ಯಾಕಪ್‌ಗಳನ್ನು ಹೊರತಂದಿತು. ಹೊಸ ಅಪ್‌ಡೇಟ್‌ನೊಂದಿಗೆ, ಬಳಕೆದಾರರು ತನ್ನ ಚಾಟ್ ಇತಿಹಾಸವನ್ನು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನೊಂದಿಗೆ ಬ್ಯಾಕಪ್ ಮಾಡಿದ್ರೆ, ಕೇವಲ ಅವರಿಗಷ್ಟೇ ನೋಡಲು ಸಾಧ್ಯವಿರುತ್ತದೆ. ಬೇರೆ ಯಾರಿಗೂ ಬ್ಯಾಕಪ್ ಅನ್ನು ಅನ್‌ಲಾಕ್ ಮಾಡಲು ಸಾಧ್ಯವಿಲ್ಲ.