ವಾಟ್ಸಾಪ್ ತನ್ನ ಬಳಕೆದಾರರ ಅನುಭವವನ್ನು ಸುಧಾರಿಸಲು ಮತ್ತೊಂದು ಭದ್ರತಾ ವೈಶಿಷ್ಟ್ಯವನ್ನು ಪರಿಚಯಿಸಲು ಯೋಜಿಸುತ್ತಿದೆ. ಬಳಕೆದಾರರಿಗೆ ದುಪ್ಪಟ್ಟು ಸುರಕ್ಷತೆಯನ್ನು ಒದಗಿಸಲು ನೆರವಾಗುವ ಡಬಲ್ ವೆರಿಫಿಕೇಶನ್ ಫೀಚರ್ ಶೀಘ್ರವೇ ಚಾಲ್ತಿಗೆ ಬರಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ WaBetaInfo ವರದಿ ಮಾಡಿದೆ.
ಈ ಫೀಚರ್‌ನ ಸ್ಕ್ರೀನ್ ಶಾಟ್ ಶೇರ್ ಮಾಡಿರುವ ಅದು, ಬಳಕೆದಾರರು ತಮ್ಮ ವಾಟ್ಸಾಪ್ ಖಾತೆಗೆ ಮತ್ತೊಂದು ಸ್ಮಾರ್ಟ್‌ಫೋನ್‌ನಿಂದ ಲಾಗ್ ಇನ್ ಮಾಡಲು ಪ್ರಯತ್ನಿಸಿದಾಗ ಡಬಲ್ ವೆರಿಫಿಕೇಶನ್ ಫೀಚರ್ ತೋರಿಸಿದ್ದನ್ನು ವಿವರಿಸಿದೆ.
ಹೆಚ್ಚುವರಿ ಭದ್ರತಾ ಕೋಡ್ ಅನ್ನು ವಾಟ್ಸಾಪ್ ಖಾತೆಗೆ ಲಾಗಿನ್ ಆಗುವಾಗ ನಮೂದಿಸುವ ಅಗತ್ಯವಿರುತ್ತದೆ. ಅದು ಎಸ್‌ಎಂಎಸ್ ಮೂಲಕ ಖಾತೆಯ ಮಾಲೀಕರಿಗೆ ಕಳುಹಿಸುತ್ತದೆ. ಪ್ರಸ್ತುತ, ಬಳಕೆದಾರರು ಕೇವಲ ಒಂದು 6 ಅಂಕಿಯ ಪರಿಶೀಲನಾ ಕೋಡ್ ಅನ್ನು ನಮೂದಿಸಬೇಕಾಗಿದೆ, ಅದನ್ನು ಅವರು ತಮ್ಮ ನೋಂದಾಯಿತ ಫೋನ್ ನಂಬರ್‌ನಲ್ಲಿ ಸ್ವೀಕರಿಸುತ್ತಾರೆ. ಡಬಲ್ ವೆರಿಫಿಕೇಶನ್ ಫೀಚರ್ ಬಳಕೆದಾರರಿಗೆ ತಮ್ಮ ಖಾತೆಯನ್ನು ಬೇರೆ ಫೋನ್‌ನಲ್ಲಿ ಲಾಗಿನ್ ಆಗುತ್ತಿರುವುದನ್ನು ಖಚಿತಪಡಿಸುತ್ತದೆ.
ಈ ಹಿಂದೆ ಹಲವು ಬಳಕೆದಾರರು ತಮ್ಮ ಖಾತೆಗಳನ್ನು ಕಳೆದುಕೊಂಡಿರುವ ಕಾರಣ ಡಬಲ್ ವೆರಿಫಿಕೇಶನ್ ಫೀಚರ್ ಸೇರ್ಪಡೆಯಾಗಿದೆ. ಹ್ಯಾಕರ್ ನಿಮ್ಮ ವಾಟ್ಸಾಪ್ ಹ್ಯಾಕ್ ಮಾಡಲು ಪ್ರಯತ್ನಿಸಿದರೆ, ಎರಡನೇ 6-ಅಂಕಿಯ ಕೋಡ್ ಬೇಕಾಗುತ್ತದೆ. ಅದು ಬಳಕೆದಾರರಿಗೆ ಎಚ್ಚರಿಕೆ ಸಂದೇಶವಿದ್ದಂತೆ. ಈ ಕುರಿತ ಇನ್ನಷ್ಟು ಮಾಹಿತಿ ಬಹಿರಂಗವಾಗಬೇಕಷ್ಟೆ.