alex Certify ‘ವಾಟ್ಸಾಪ್’ ನಲ್ಲಿ ಮತ್ತಷ್ಟು ಹೊಸ ಫೀಚರ್: ಗೋಪ್ಯತೆ ದೃಷ್ಟಿಯಿಂದ ಕೆಲವೊಂದು ಮಾರ್ಪಾಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ವಾಟ್ಸಾಪ್’ ನಲ್ಲಿ ಮತ್ತಷ್ಟು ಹೊಸ ಫೀಚರ್: ಗೋಪ್ಯತೆ ದೃಷ್ಟಿಯಿಂದ ಕೆಲವೊಂದು ಮಾರ್ಪಾಡು

ನವದೆಹಲಿ: ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ವಾಟ್ಸಾಪ್ ಹಲವು ಅಪ್​ಡೇಟ್ಸ್​ಗಳನ್ನು ನೀಡುತ್ತಾ ಬಂದಿದ್ದು ಇದೀಗ ಹೊಸ ಅಪ್​ಡೇಟ್​ ಮಾಡಿದೆ. ಅದೇನೆಂದರೆ, ಗ್ರೂಪ್​ಗಳಲ್ಲಿ ಯಾರಾದರೂ ಎಕ್ಸಿಟ್​ ಆದರೆ ಅದು ಗ್ರೂಪ್​ನಲ್ಲಿ ಇರುವ ಎಲ್ಲರಿಗೂ ತಿಳಿಯುವುದಿಲ್ಲ. ಬದಲಿಗೆ ಅಡ್ಮಿನ್​ಗಳಿಗೆ ಮಾತ್ರ ತಿಳಿಯುತ್ತದೆ.

ಇದರ ಜತೆಗೆ Android ಮತ್ತು iOS ಗಾಗಿ ಸ್ಕ್ರೀನ್‌ಶಾಟ್ ಬ್ಲಾಕಿಂಗ್ ಎಂಬ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಗ್ರಾಹಕರ ಹಿತದೃಷ್ಟಿಯಿಂದ ಮೆಸೇಜ್​ಗಳ ಸ್ಕ್ರೀನ್‌ಶಾಟ್ ಅಥವಾ ವೀಡಿಯೊ ರೆಕಾರ್ಡಿಂಗ್ ತೆಗೆದುಕೊಳ್ಳುವುದನ್ನು ಈ ವೈಶಿಷ್ಟ್ಯವು ನಿರ್ಬಂಧಿಸುತ್ತದೆ.

ಡೆಸ್ಕ್‌ಟಾಪ್‌ನಲ್ಲಿ ಸಂದೇಶಗಳನ್ನು ಕಳುಹಿಸುವ ಮತ್ತು ತೆರೆಯುವ ಸಾಮರ್ಥ್ಯವನ್ನು ತೆಗೆದುಹಾಕುವ ಹೊಸ ಫೀಚರ್​ ಕೂಡ ಇದೀಗ ಸೇರ್ಪಡೆಗೊಂಡಿದೆ.

ಇದರಿಂದಾಗಿ ನೀವು ವಾಟ್ಸಾಪ್​ ವೆಬ್​ ಅಥವಾ ವಾಟ್ಸಾಪ್​ ಡೆಸ್ಕ್‌ಟಾಪ್ ಅಪ್ಲಿಕೇಶನ್ ಬಳಸುತ್ತಿದ್ದರೆ ಮತ್ತು ನೀವು ಒಮ್ಮೆ ಸಂದೇಶವನ್ನು ಸ್ವೀಕರಿಸಿದರೆ, ಅದನ್ನು ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ತೆರೆಯಲು ನಿಮಗೆ ಸಾಧ್ಯವಾಗುವುದಿಲ್ಲ. ನೀವು ಅದನ್ನು ನಿಮ್ಮ ಫೋನ್‌ನಲ್ಲಿ ಮಾತ್ರ ತೆರೆಯಬಹುದು.

ಬಳಕೆದಾರರು ತಮ್ಮ ಡೆಸ್ಕ್‌ಟಾಪ್ ಅಪ್ಲಿಕೇಶನ್ ಬಳಸಿ ಒಮ್ಮೆ ಸಂದೇಶವನ್ನು ಕಳುಹಿಸಲು ಸಾಧ್ಯವಿಲ್ಲ. ಇದಿಷ್ಟೇ ಅಲ್ಲದೇ, ವಾಟ್ಸಾಪ್​ ಅಪ್ಲಿಕೇಶನ್ ನಲ್ಲಿ ಆಡ್ಮಿನ್‌ಗಳು ನಿರ್ದಿಷ್ಟ ಗುಂಪುಗಳಿಗೆ ಅಥವಾ ಇಡೀ ಸಮುದಾಯಕ್ಕೆ ಪ್ರಕಟಣೆ ಗುಂಪಿನ ಮೂಲಕ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗುವಂತೆ WhatsApp Communities ಫೀಚರ್ ರಿಲೀಸ್ ಮಾಡಿದೆ. ಈ ಫೀಚರ್ ಮೂಲಕ ಪ್ರತ್ಯೇಕ ಗುಂಪುಗಳನ್ನು ಒಟ್ಟುಗೂಡಿಸಲು ಸಾಧ್ಯವಾಗುತ್ತದೆ.

ನಿರ್ದಿಷ್ಟ ಉದ್ದೇಶಕ್ಕಾಗಿ ರಚಿಸಿಕೊಳ್ಳಬಹುದಾದ ಸಮುದಾಯದ ಗ್ರೂಪ್‌ನಲ್ಲಿ ಆಹ್ವಾನಿಸಲಾದ ಬಳಕೆದಾರರು ತಮ್ಮ ಆಸಕ್ತಿಗಳ ಆಧಾರದ ಮೇಲೆ ಯಾವ ಗ್ರೂಪ್ ಅನ್ನು ಸೇರಬೇಕೆಂದು ನಿರ್ಧರಿಸಬಹುದು. ಒಂದು ಗ್ರೂಪ್‌ನಲ್ಲಿ 512 ಜನರು ಇರುವ ಒಂದು ಸಮುದಾಯದ ಜನರು ತಮ್ಮ ಅಗತ್ಯ ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಪಡೆದುಕೊಳ್ಳಲು ಸಾಧ್ಯವಾಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...