ವೈಯಕ್ತಿಕ ಮತ್ತು ವಿತ್ತೀಯ ವಿಚಾರಗಳ ಹಂಚಿಕೆ ವಿಚಾರವಾಗಿ ತನ್ನ ಪರಿಷ್ಕೃತ ಬಳಕೆದಾರ ನೀತಿಯ ವಿಚಾರವಾಗಿ ಗ್ರಾಹಕರು, ಮಾಧ್ಯಮ ಮತ್ತು ಸರ್ಕಾರೀ ಸಂಸ್ಥೆಗಳಿಂದ ಭಾರೀ ಟೀಕೆ ಕೇಳಿ ಬಂದ ಬಳಿಕ ವಾಟ್ಸಾಪ್, ಇದೀಗ ವೈಯಕ್ತಿಕ ವಿವರಗಳನ್ನು ರಕ್ಷಿಸುವ ಸಂಬಂಧ ಹೊಸ ಕ್ರಮಕ್ಕೆ ಮುಂದಾಗಿದೆ.
ಇಬ್ಬರು ಖಾಸಗಿ ವ್ಯಕ್ತಿಗಳ ನಡುವಿನ ಸಂವಹನ ಸಂಪೂರ್ಣವಾಗಿ ಎಂಡ್-ಟು-ಎಂಡ್ ಎಂಕ್ರಿಪ್ಟ್ ಮಾಡುವ ಮೂಲಕ ಖುದ್ದು ವಾಟ್ಸಾಪ್ ಅಥವಾ ಸರ್ಕಾರೀ ಏಜೆನ್ಸಿಗಳು ಇದನ್ನು ಟ್ರ‍್ಯಾಕ್ ಮಾಡದಂತೆ ಖಾತ್ರಿ ನೀಡಬಲ್ಲ ಕ್ರಮವೊಂದನ್ನು ತೆಗೆದುಕೊಳ್ಳಲು ವಾಟ್ಸಾಪ್ ಮುಂದಾಗಿದೆ.
ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಕೆಪಿಟಿಸಿಎಲ್, ಎಸ್ಕಾಂಗಳಲ್ಲಿ 1492 ಹುದ್ದೆಗಳ ನೇಮಕಾತಿ
ಇತ್ತೀಚಿನ ನಿದರ್ಶನದಲ್ಲಿ, ಡೆಸ್ಕ್‌ಟಾಪ್‌ನಲ್ಲಿ ತನ್ನ ಅಪ್ಲಿಕೇಶನ್ ಬಳಸುವ ಮೂಲಕ ವಾಟ್ಸಾಪ್ ಎರಡು-ಹಂತದ ಖಾತ್ರೀಕರಣದ ಮೂಲಕ ಹೆಚ್ಚುವರಿ ಭದ್ರತೆಯನ್ನು ತನ್ನ ಮೆಸೆಂಜರ್ ಬಳಕೆದಾರರಿಗೆ ಕೊಡಲು ಮುಂದಾಗಿದೆ ಎಂದು ವರದಿಗಳು ತಿಳಿಸುತ್ತಿವೆ.
ಸದ್ಯಕ್ಕೆ ಇದು ಬರೀ ಐಓಎಸ್ ಮತ್ತು ಆಂಡ್ರಾಯ್ಡ್ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಮಾತ್ರವೇ ಲಭ್ಯವಿದೆ. ಈ ಆಯ್ಕೆಯನ್ನು ನೀವು ಬೆಟಾ ಅಪ್ಲಿಕೇಶನ್‌ನ ಸ್ಕ್ರೀನ್‌ಶಾಟ್‌ನಲ್ಲಿ ನೋಡಬಹುದಾಗಿದೆ.