ಮೆಟಾ ಮಾಲೀಕತ್ವದ ತ್ವರಿತ ಸಂದೇಶ ಸೇವೆಯ ವಾಟ್ಸಾಪ್ ಆಗಸ್ಟ್ ತಿಂಗಳಿನಲ್ಲಿ ಭಾರತದಲ್ಲಿ 74 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿದೆ. ಆಗಸ್ಟ್ 1 ರಿಂದ 31ರ ನಡುವೆ ಒಂದು ತಿಂಗಳಿನಲ್ಲಿ ವಾಟ್ಸಾಪ್ ಕಂಪನಿಯು 74,20,748 ಖಾತೆಗಳನ್ನು ನಿಷೇಧಿಸಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಹೊಸ ಐಟಿ ನಿಯಮಗಳು 2021 ರ ಅನುಸಾರ ಮತ್ತು ಬಳಕೆದಾರರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ 74 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಖಾತೆಗಳನ್ನು ನಿರ್ಬಂಧಿಸಲಾಗಿದೆ. ಇದರಲ್ಲಿ ಸುಮಾರು 3,506,905 ಖಾತೆಗಳನ್ನು ಬಳಕೆದಾರರಿಂದ ಯಾವುದೇ ವರದಿಗಳು ಬರುವ ಮೊದಲು ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ ಎಂದು ವಾಟ್ಸಾಪ್ ತನ್ನ ಮಾಸಿಕ ವರದಿಯಲ್ಲಿ ತಿಳಿಸಿದೆ.
ದೇಶದಲ್ಲಿ 500 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಅತ್ಯಂತ ಜನಪ್ರಿಯ ಸಂದೇಶ ರವಾನೆ ಸೇವೆಯ ವೇದಿಕೆಯು ಆಗಸ್ಟ್ ನಲ್ಲಿ ದೇಶದಲ್ಲಿ ಮತ್ತೊಂದು ದಾಖಲೆಯ 14,767 ದೂರು ವರದಿಗಳನ್ನು ಸ್ವೀಕರಿಸಿದ್ದು ಇದರಲ್ಲಿ 71 ಖಾತೆಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. “ಅಕೌಂಟ್ಸ್ ಆಕ್ಷನ್ಡ್” ವರದಿಯನ್ನು ಆಧರಿಸಿ ವಾಟ್ಸಾಪ್ ಪರಿಹಾರ ಕ್ರಮವನ್ನು ತೆಗೆದುಕೊಂಡ ವರದಿಗಳನ್ನು ಸೂಚಿಸುತ್ತದೆ.
ಇದಲ್ಲದೆ ವಾಟ್ಸಾಪ್ ಕಂಪನಿಯು ಆಗಸ್ಟ್ ನಲ್ಲಿ ದೇಶದಲ್ಲಿ ಕುಂದುಕೊರತೆ ಮೇಲ್ಮನವಿ ಸಮಿತಿಯಿಂದ ಆದೇಶವನ್ನು ಸ್ವೀಕರಿಸಿದೆ ಮತ್ತು ಅದನ್ನು ಪಾಲಿಸಿದೆ. ಲಕ್ಷಾಂತರ ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಸಶಕ್ತಗೊಳಿಸುವ ಪ್ರಯತ್ನದಲ್ಲಿ ಕೇಂದ್ರವು ಇತ್ತೀಚೆಗೆ ಕುಂದುಕೊರತೆ ಮೇಲ್ಮನವಿ ಸಮಿತಿ (GAC) ಅನ್ನು ಪ್ರಾರಂಭಿಸಿತು. ಹೊಸದಾಗಿ ರಚಿಸಲಾದ ಸಮಿತಿಯು ಅತಿ ದೊಡ್ಡ ಟೆಕ್ ಕಂಪನಿಗಳನ್ನು ಪಳಗಿಸಲು ದೇಶದ ಡಿಜಿಟಲ್ ಕಾನೂನುಗಳನ್ನು ಬಲಪಡಿಸುವ ಕ್ರಮವಾಗಿದೆ.