ಸೋಶಿಯಲ್ ಮೀಡಿಯಾದ ಪ್ರಭಾವಿ ಮಾಧ್ಯಮವಾದ ವಾಟ್ಸಾಪ್, ನವೆಂಬರ್ ತಿಂಗಳಿನಲ್ಲಿ ಭಾರತೀಯರ 37 ಲಕ್ಷ ವಾಟ್ಸಾಪ್ ಖಾತೆಗಳನ್ನು ಬ್ಯಾನ್ ಮಾಡಿದೆ. ಇದು ಹಿಂದಿನ ತಿಂಗಳಿಗಿಂತಲೂ ಅಂದರೆ ಅಕ್ಟೋಬರ್ ಗಿಂತ ಶೇಕಡ 60ರಷ್ಟು ಅಧಿಕ ಎಂದು ಮೂಲಗಳು ತಿಳಿಸಿವೆ.
ಬಳಕೆದಾರರು ನಕಲಿ ಸೇರಿದಂತೆ ವಿವಿಧ ಕಾರಣಗಳಿಗಾಗಿ ಸಲ್ಲಿಸುವ ಮನವಿಗೂ ಮುನ್ನವೇ 9.9 ಲಕ್ಷ ಖಾತೆಗಳನ್ನು ಬ್ಯಾನ್ ಮಾಡಲಾಗಿದ್ದು, ನವೆಂಬರ್ 1, 2022 ರಿಂದ 30 ನವೆಂಬರ್ 2022 ರ ವರೆಗೆ ಒಟ್ಟು 3,716,000 ವಾಟ್ಸಾಪ್ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ.
ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ತಡೆಯಲು ಕೇಂದ್ರ ಸರ್ಕಾರ ಕಠಿಣ ನಿಯಮಗಳನ್ನು ರೂಪಿಸಿದ್ದು, ಸಂಸ್ಥೆಗಳು ಪ್ರತಿ ತಿಂಗಳು ಮಾಹಿತಿ ನೀಡಬೇಕಾಗುತ್ತದೆ. ಜೊತೆಗೆ ಬಳಕೆದಾರದಿಂದ ದೂರು ಕೇಳಿ ಬಂದ ವೇಳೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.
ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ನವೆಂಬರ್ ತಿಂಗಳಿನಲ್ಲಿ ಬಳಕೆದಾರರಿಂದ ಅತಿ ಹೆಚ್ಚು ದೂರುಗಳು ಕೇಳಿ ಬಂದಿವೆ ಎನ್ನಲಾಗಿದ್ದು, ಇವುಗಳನ್ನು ಪರಿಶೀಲಿಸಿ ಸಾಬೀತಾದ ಸಂದರ್ಭದಲ್ಲಿ ಅಂತಹ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ.