ದೇಶದೆಲ್ಲೆಡೆ ಲಾಕ್ಡೌನ್ ಸಡಿಲಿಕೆಯಾಗಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಪ್ರವಾಸಿಗರು ಪ್ರವಾಸಿ ತಾಣಗಳಿಗೆ ದಂಡೆತ್ತಿ ಹೋಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸರ್ಕಾರಕ್ಕೆ ಹಾಗೂ ಪೊಲೀಸರಿಗೆ ಜನರನ್ನು ಎಚ್ಚರಿಕೆಯಿಂದ ಇರುವಂತೆ ಮಾಡುವುದು ಸವಾಲಿನ ಕೆಲಸವಾಗಿದೆ.
ಕೋವಿಡ್ ಮಾರ್ಗಸೂಚಿ ಪ್ರಕಾರ ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಬಳಕೆ ಕಡ್ಡಾಯ. ಆದರೆ ಜನರು ಈ ವಿಚಾರವನ್ನು ಮರೆಯುತ್ತಿದ್ದಾರೆ ಅಥವಾ ನಿರ್ಲಕ್ಷಿಸುತ್ತಿದ್ದಾರೆ. ಹೀಗಾಗಿ ಮಾಸ್ಕ್ ಬಗ್ಗೆ ಎಚ್ಚರಿಕೆ ನೀಡಲು ಉತ್ತರಪ್ರದೇಶ ಪೊಲೀಸರು ಮಾಡಿದ ಒಂದು ಟ್ವೀಟ್ ಈಗ ದೇಶದ ಗಮನ ಸೆಳೆಯುತ್ತಿವೆ.
ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: BSF ಗ್ರೂಪ್ ಬಿ, ಸಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಇತ್ತೀಚೆಗೆ ಪ್ರವಾಸಿಗರು ಜನಪ್ರಿಯ ಪ್ರವಾಸಿತಾಣಗಳಾದ ಮನಾಲಿ, ಶಿಮ್ಲಾ ಮತ್ತು ನೈನಿತಾಲ್ ಗಳಿಗೆ ಹರಿದು ಬರುತ್ತಿದ್ದಾರೆ. ಈ ಪಟ್ಟಣಗಳಲ್ಲಿ ಭಾರಿ ಜನಸಂದಣಿ ಉಂಟಾಗುತ್ತಿದೆ.
ಮನಾಲಿ ಮತ್ತು ಮುಸ್ಸೂರಿಯ ಇತ್ತೀಚಿನ ಫೋಟೋಗಳು ಮತ್ತು ವಿಡಿಯೊಗಳು ಜನರು ಕೋವಿಡ್ ಮುನ್ನೆಚ್ಚರಿಕೆ ಬಗ್ಗೆ ಎಷ್ಟು ಅಸಡ್ಡೆ ಹೊಂದಿದ್ದಾರೆಂದು ತೋರಿಸುತ್ತದೆ. ಆದ್ದರಿಂದ, ಯುಪಿ ಪೋಲಿಸರು ಟ್ವೀಟ್ ಮೂಲಕ ಮಾಸ್ಕ್ ಮಹತ್ವವನ್ನು ನವೀನ ರೀತಿಯಲ್ಲಿ ಹೇಳಿದ್ದಾರೆ.
ಟ್ವೀಟ್ ಪೋಸ್ಟ್ ನಲ್ಲಿ ಮನಾಲಿ, ಆಗ್ರಾ, ಶಿಮ್ಲಾ, ಮತ್ತು ಕುಲು ಎಂಬ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಅವುಗಳ ನಡುವೆ ಸಾಮಾನ್ಯವಾದದ್ದನ್ನು ಅದು ವಿವರಿಸಲಾಗಿದೆ. ಎಲ್ಲಾ ಊರುಗಳ ಮೊದಲ ಇಂಗ್ಲಿಷ್ ವರ್ಣಮಾಲೆಯನ್ನು ಪರಿಗಣಿಸಿದರೆ ಮಾಸ್ಕ್ ಎಂದಾಗುತ್ತದೆ. ಈ ಸಂಗತಿ ಮರೆಯದಿರಿ ಎಂಬ ಎಚ್ಚರಿಕೆ ಸಂದೇಶ ಅದರಲ್ಲಿದೆ.