ಮಂಡ್ಯ : ಅಮ್ಮ ಸುಮಲತಾ ಏನೇ ನಿರ್ಧಾರ ಕೈಗೊಂಡರು ಅವರ ಜೊತೆ ಇರುತ್ತೇನೆ ಎಂದು ನಟ ದರ್ಶನ್ ಹೇಳಿದ್ದಾರೆ.
ಮಂಡ್ಯದಲ್ಲಿ ನಡೆದ ಸುಮಲತಾ ಅವರ ಬಹಿರಂಗ ಸಭೆಯಲ್ಲಿ ಮಾತನಾಡಿದ ನಟ ದರ್ಶನ್ ಅಮ್ಮ ಸುಮಲತಾ ಏನೇ ನಿರ್ಧಾರ ಕೈಗೊಂಡರು ಅವರ ಜೊತೆ ಇರುತ್ತೇನೆ , ಅವರು ಹಾಳು ಬಾವಿಗೆ ಬೀಳು ಅಂದ್ರು ಬೀಳುತ್ತೇನೆ ಎಂದು ಹೇಳುವ ಮೂಲಕ ನಟ ದರ್ಶನ್ ಸುಮಲತಾಗೆ ಈ ಬಾರಿ ಮತ್ತೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.
ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ ಅವರ ಬೆನ್ನೆಲುಬಾಗಿ ಯಶ್ ಮತ್ತು ದರ್ಶನ್ ನಿಂತಿದ್ದರು. ಇದೀಗ ಮತ್ತೆ ಸುಮಲತಾ ಅವರ ಬೆಂಬಲಕ್ಕೆ ನಟ ದರ್ಶನ್ ನಿಂತಿದ್ದಾರೆ. ಕೆಲವೇ ಕ್ಷಣಗಳಲ್ಲಿ ಸುಮಲತಾ ಅವರು ತಮ್ಮ ರಾಜಕೀಯ ನಿಲುವು ಪ್ರಕಟಿಸಿದ್ದಾರೆ.