ಮದುವೆ ಅಂದಾಕ್ಷಣ ಅಲ್ಲಿ ಎಲ್ಲವೂ ಸ್ಪೆಷಲ್ ಆಗಿರಬೇಕು. ನಿಮ್ಮ ಉಡುಪು, ಆಭರಣ, ಮೇಕಪ್ ಎಲ್ಲವೂ ಪರ್ಫೆಕ್ಟ್ ಆಗಿರಬೇಕು ಅಂತಾ ಪ್ರತಿಯೊಬ್ಬ ವಧುವಿಗೂ ಆಸೆ ಇದ್ದೇ ಇರುತ್ತೆ. ಎಲ್ಲವೂ ಅದ್ಭುತವಾಗಿದ್ರೂ ಹೇರ್ ಸ್ಟೈಲ್ ಸರಿಯಾಗಿಲ್ಲ ಅಂದ್ರೆ ಪಟ್ಟ ಶ್ರಮವೆಲ್ಲ ವ್ಯರ್ಥವಾಗಿಬಿಡುತ್ತೆ. ಹಾಗಾಗಿ ನೀವೇ ಒಂದು ಕೇಶ ವಿನ್ಯಾಸವನ್ನು ಆಯ್ಕೆ ಮಾಡಿಕೊಂಡು ಯಡವಟ್ಟು ಮಾಡಿಕೊಳ್ಳೋ ಬದಲು ಸ್ಟೈಲಿಸ್ಟ್ ಗಳನ್ನು ಸಂಪರ್ಕಿಸಿ. ಜೊತೆಗೆ ಕೇಶವಿನ್ಯಾಸಕ್ಕೆ ಅತಿಯಾಗಿ ಎಕ್ಸೆಸ್ಸರೀಸ್ ಬಳಸಬೇಡಿ ಅನ್ನೋದು ತಜ್ಞರ ಸಲಹೆ. ಹೇರ್ ಸ್ಟೈಲ್ ಹೇಗಿರಬೇಕು ಅನ್ನೋದಕ್ಕೆ ಇನ್ನೂ ಕೆಲವು ಟಿಪ್ಸ್ ನಾವ್ ಕೊಡ್ತೀವಿ.
*ನಿಮ್ಮ ತಲೆಗೂದಲಿನ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿರಲಿ, ಅದರ ಉದ್ದ ಮತ್ತು ರಚನೆಯ ಬಗ್ಗೆ ಗಮನವಿರಲಿ. ನಿಮ್ಮ ನೆಚ್ಚಿನ ನಟಿ ಮಾಡಿಕೊಂಡ ಕೇಶವಿನ್ಯಾಸವೇ ಉತ್ತಮ ಎಂದುಕೊಳ್ಳಬೇಡಿ. ಸ್ಟೈಲಿಸ್ಟ್ ಗಳ ಸಲಹೆ ಪಡೆಯಿರಿ. ಕೂದಲಿಗೆ ನಷ್ಟವಾಗುವಂತಹ ಭಾರೀ ಬಣ್ಣಗಳ ಬಳಕೆ ಬೇಡ.
*ನಿಮ್ಮ ಮುಖಕ್ಕೆ ಒಪ್ಪುವಂತಹ ಹೇರ್ ಸ್ಟೈಲ್ ಅನ್ನೇ ಸ್ಟೈಲಿಸ್ಟ್ ಗಳು ಆಯ್ಕೆ ಮಾಡುತ್ತಾರೆ. ಅದನ್ನೊಮ್ಮೆ ಮೊದಲೇ ಟ್ರೈ ಮಾಡಿ ನೋಡಿದ್ರೆ ಒಳ್ಳೆಯದು.
*ಮದುವೆ ದಿನ ನಿಮ್ಮ ಕೇಶವಿನ್ಯಾಸ ಸಿಂಪಲ್ ಮತ್ತು ಪರ್ಫೆಕ್ಟ್ ಆಗಿರಲಿ. ನಿಮ್ಮ ಉಡುಪಿಗೆ ಹೊಂದುವಂತಹ ಆಕ್ಸೆಸ್ಸರೀಸ್ ಬಳಸಿ. ತಾಜಾ ಹೂವುಗಳನ್ನು ಮುಡಿದುಕೊಂಡ್ರೆ ಉತ್ತಮ.
*ನಿಮ್ಮ ಕೇಶವಿನ್ಯಾಸ ಹಾಳಾಗದಂತೆ ನೋಡಿಕೊಳ್ಳುವ, ಅಂದ ಹೆಚ್ಚಿಸುವ ಅಲಂಕಾರಿಕ ಸಾಮಾಗ್ರಿ ಬಳಸುವುದು ಉತ್ತಮ. ಆದ್ರೆ ಅದನ್ನು ಅತಿಯಾಗಿ ಬಳಸಿದ್ರೆ ನಿಮ್ಮ ಕೂದಲ ಮೇಲೆ ದುಷ್ಪರಿಣಾಮ ಬೀರಬಹುದು.
*ಮದುವೆಯ ದಿನ ಕೂದಲಿಗೆ ಶಾಂಪೂ ಅಥವಾ ಕಂಡಿಷನರ್ ಹಾಕಿ ತೊಳೆದುಕೊಳ್ಳಬೇಡಿ. ಇದ್ರಿಂದ ಕೇಶ ವಿನ್ಯಾಸ ಮಾಡುವುದು ಕಷ್ಟವಾಗುತ್ತದೆ.