ಚಿನ್ನದ ಆಭರಣಗಳಿಗೆ ಸಂಬಂಧಿಸಿದಂತೆ ಚಿನ್ನದ ಹಾಲ್ಮಾರ್ಕಿಂಗ್ ನಿಯಮಗಳು ಬುಧವಾರದಿಂದ ಜಾರಿಗೆ ಬಂದಿವೆ. ಎಲ್ಲಾ ಚಿನ್ನದ ಆಭರಣಗಳ ಮೇಲೆ ಹಾಲ್ಮಾರ್ಕಿಂಗ್ ಅಗತ್ಯವಾಗಿರುತ್ತದೆ. ಮನೆಯಲ್ಲಿರುವ ಚಿನ್ನ ಅಥವಾ ಚಿನ್ನದ ಆಭರಣದ ಗತಿಯೇನು ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ಹಾಲ್ಮಾರ್ಕಿಂಗ್ ಅನಿವಾರ್ಯವಾದ್ಮೇಲೆ ಮನೆಯಲ್ಲಿರುವ ಚಿನ್ನದ ಕಥೆಯೇನು ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಚಿನ್ನದ ಮೇಲೆ ಅತಿ ಹೆಚ್ಚು ಹೂಡಿಕೆ ಮಾಡುವ ಭಾರತದಲ್ಲಿ ಚಿನ್ನ ಪ್ರಿಯರು ಈ ಬಗ್ಗೆ ಭಯ ಪಡಬೇಕಾಗಿಲ್ಲ. ಆಭರಣಕಾರರು ಗ್ರಾಹಕರಿಂದ ಹಳೆ ಆಭರಣಗಳನ್ನು ಖರೀದಿಸಬಹುದೆಂದು ಸರ್ಕಾರ ಹೇಳಿದೆ.
ಮನೆಯಲ್ಲಿರುವ ಆಭರಣ, ಚಿನ್ನದ ನಾಣ್ಯಗಳನ್ನು ಮಾರಾಟ ಮಾಡುವಾಗ ಹಾಲ್ಮಾರ್ಕ್ ಹಾಕಬೇಕಾಗಿಲ್ಲ. ಹಾಲ್ಮಾರ್ಕಿಂಗ್ ಆಭರಣ ಮಾರಾಟ ಮಾಡುವುದು ಆಭರಣಕಾರರಿಗೆ ಮಾತ್ರ ಕಡ್ಡಾಯ. ಗ್ರಾಹಕರು ಹಾಲ್ಮಾರ್ಕ್ ಇಲ್ಲದ ಚಿನ್ನವನ್ನು ಮಾರಾಟ ಮಾಡಬಹುದು.
ಮನೆಯಲ್ಲಿ ಹಾಲ್ಮಾರ್ಕಿಂಗ್ ಇಲ್ಲದೆ ಇಟ್ಟುಕೊಂಡಿರುವ ಆಭರಣಗಳ ಮೌಲ್ಯ ಕುಸಿಯುತ್ತೆ ಎಂಬ ಆತಂಕವಿದೆ. ಆದ್ರೆ ಈ ಭಯ ಬೇಡ. ಗ್ರಾಹಕ ತನ್ನ ಚಿನ್ನದ ಆಭರಣಗಳನ್ನು ಅದರ ಶುದ್ಧತೆಯ ಆಧಾರದ ಮೇಲೆ ಮಾರುಕಟ್ಟೆ ಮೌಲ್ಯಕ್ಕೆ ಮಾರಾಟ ಮಾಡಬಹುದು. ಗೋಲ್ಡ್ ಹಾಲ್ಮಾರ್ಕಿಂಗ್ ಅದರ ಬೆಲೆಗಳ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ.