ಬೆಂಗಳೂರು : ನಮಗೆ ನಿಜವಾಗಿಯೂ ಬೇಕಾಗಿರುವುದು ಸಮಾನತಾವಾದಿ ನಾಗರಿಕ ಸಂಹಿತೆ ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.
ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡ ನಟ ಚೇತನ್ ಅಹಿಂಸಾ
”ಪ್ರಧಾನಿ ಮೋದಿ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ‘ಧರ್ಮನಿರಪೇಕ್ಷತೆಯ (ಜಾತ್ಯತೀತ) ನಾಗರಿಕ ಸಂಹಿತೆ’ ಎಂದು ಉಲ್ಲೇಖಿಸಿದ್ದರು”.
”ವ್ಯಾಖ್ಯಾನದ ಪ್ರಕಾರ, ಧರ್ಮನಿರಪೇಕ್ಷತೆಯು ಧರ್ಮ ಮತ್ತು ಸರ್ಕಾರವನ್ನು ಬೇರ್ಪಡಿಸುವುದಾಗಿದೆ; ಆದ್ದರಿಂದ, ಮೋದಿಯವರ ಹೆಸರು ಬದಲಾವಣೆಯು ಭಾಗಶಃ ಸೂಕ್ತವಾಗಿದೆ.ಆದರೆ, ಧರ್ಮನಿರಪೇಕ್ಷತೆಯು ಲಿಂಗ (ಸ್ತ್ರೀ/ಪುರುಷ/LGBTQ) ಮತ್ತು ಇತರ ರೂಪಗಳ ಸಮಾನತೆಯನ್ನು ಖಾತರಿಪಡಿಸುವುದಿಲ್ಲ ಎಂಬುದನ್ನು ಪ್ರಧಾನಿ ಮೋದಿ ಮರೆತಿದ್ದಾರೆ.ನಮಗೆ ನಿಜವಾಗಿಯೂ ಬೇಕಾಗಿರುವುದು ಸಮಾನತಾವಾದಿ ನಾಗರಿಕ ಸಂಹಿತೆ” ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.