ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಶುರುವಾಗಿದೆ. ಜನವರಿ 22ರಂದು ನಡೆಯುವ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆ ನಡೆಯುತ್ತಿದೆ. ಈ ದಿನವನ್ನು ಹಬ್ಬದಂತೆ ಆಚರಿಸಲು ಪ್ರತಿಯೊಬ್ಬರೂ ಉತ್ಸುಕರಾಗಿದ್ದಾರೆ. ಮನೆ ಮನೆಗೆ ಅಯೋಧ್ಯೆ ಕಾರ್ಯಕ್ರಮದ ಆಮಂತ್ರಣ ಬಂದಿದೆ. ರಾಮನ ಭಕ್ತರು ಮನೆ ಮನೆಗೆ ತೆರಳಿ ಅಯೋಧ್ಯೆ ಕಾರ್ಯಕ್ರಮಕ್ಕೆ ಅಕ್ಷತೆ ನೀಡಿ ಆಹ್ವಾನಿಸುತ್ತಿದ್ದಾರೆ. ರಾಮ ಭಕ್ತರಿಂದ ಬಂದ ಈ ಅಕ್ಷತೆಯನ್ನು ಏನು ಮಾಡ್ಬೇಕು ಎನ್ನುವ ಪ್ರಶ್ನೆ ಅನೇಕರಲ್ಲಿದೆ.
ಅಕ್ಕಿಗೆ ಅರಿಶಿನ ಮತ್ತು ಕಂಕುಮವನ್ನು ಬೆರೆಸಿ ಅಕ್ಷತೆ ಸಿದ್ಧಪಡಿಸಲಾಗುತ್ತದೆ. ಈ ಅಕ್ಷತೆಗೆ ಹಿಂದೂ ಧರ್ಮದಲ್ಲಿ ಮಹತ್ವವಿದೆ. ಪ್ರತಿ ಹಬ್ಬದಲ್ಲಿ ಮಾತ್ರವಲ್ಲ ಯಾವುದೇ ಸಮಾರಂಭಕ್ಕೆ, ಮದುವೆಗೆ ಸ್ನೇಹಿತರು, ಸಂಬಂಧಿಕರನ್ನು ಆಹ್ವಾನಿಸುವಾಗ ಅಕ್ಷತೆ ನೀಡಿ ಆಹ್ವಾನಿಸುವ ಪದ್ಧತಿ ನಮ್ಮಲ್ಲಿದೆ.
- ನಿಮ್ಮ ಮನೆಗೂ ಅಯೋಧ್ಯೆ ಅಕ್ಷತ ಬಂದಿದ್ದರೆ ನೀವು ಅದನ್ನು ಕೆಂಪು ರೇಷ್ಮೆ ಬಟ್ಟೆಯಲ್ಲಿ ಕಟ್ಟಿ ಕಪಾಟಿನಲ್ಲಿ ಇಡಿ. ಹೀಗೆ ಮಾಡಿದ್ರೆ ಲಕ್ಷ್ಮಿ ಯೋಗ ಉಂಟಾಗಿ ಮನೆಯಲ್ಲಿ ಸಂತನ ಮನೆ ಮಾಡುತ್ತದೆ.
- ನೀವು ರಾಮಲಲ್ಲಾ ಪ್ರಾಣ ಪ್ರತಿಷ್ಠಾ ದಿನ ಈ ಅಕ್ಷತೆಯನ್ನು ಖೀರ್ ಮಾಡಲು ಬಳಸಿ. ನೀವು ಹಾಗೂ ನಿಮ್ಮ ಕುಟುಂಬಸ್ಥರು ಇದನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸಿ. ಖೀರ್ ಅನ್ನು ಬಡವರಿಗೆ ದಾನ ಕೂಡ ಮಾಡಬಹುದು. ಇದು ಮನೆಯಲ್ಲಿ ಸಮೃದ್ಧಿ ತರುತ್ತದೆ.
- ನೀವು ಶುಭಕಾರ್ಯಕ್ಕಾಗಿ ಮನೆಯಿಂದ ಹೊರಡುತ್ತಿದ್ದರೆ ಇದನ್ನು ಹಣೆಗೆ ಹಚ್ಚಿಕೊಂಡು ಹೋಗಿ. ಇದು ನಿಮಗೆ ಮಂಗಲವನ್ನುಂಟು ಮಾಡುತ್ತದೆ.
- ನಿಮ್ಮ ಮನೆ ಮಗಳ ಮದುವೆ ಈಗಷ್ಟೇ ನಡೆದಿದ್ದರೆ ನೀವು ಈ ಅಕ್ಷತೆಯನ್ನು ಮಗಳಿಗೆ ದಾನದ ರೂಪದಲ್ಲಿ ನೀಡಬಹುದು. ಇದ್ರಿಂದ ಮಗಳು ಹೋಗುವ ಮನೆಯಲ್ಲಿ ಐಶ್ವರ್ಯ ನೆಲೆಸುತ್ತದೆ.
- ಮದುವೆಯಾಗಿ ಮನೆಗೆ ಬಂದ ಸೊಸೆ ತನ್ನ ಮೊದಲ ಅಡುಗೆ ಸಮಯದಲ್ಲಿ ಈ ಅಕ್ಷತೆಯನ್ನು ಬಳಸಬಹುದು. ಇದು ಮನೆಯಲ್ಲಿ ಸೌಹಾರ್ದತೆ ತರುತ್ತದೆ.