ನವದೆಹಲಿ : ನಿಮ್ಮ ಹೆಂಡತಿಗೆ ಕೋಪ ಬಂದರೆ ಏನು ಮಾಡಬೇಕು, ಹೆಂಡತಿ ಬೈದರೆ ಏನು ಮಾಡಬೇಕು..? ಪುರುಷರ ಸುಖ ಸಂಸಾರಕ್ಕೆ ಅಸಾದುದ್ದೀನ್ ಒವೈಸಿ ಕೆಲವು ಸಲಹೆ ನೀಡಿದ್ದು ಅಚ್ಚರಿಗೆ ಕಾರಣವಾಗಿದೆ.
ವಿವಾಹಿತ ಪುರುಷನು ತನ್ನ ಹೆಂಡತಿ ತನ್ನ ಮೇಲೆ ಕೋಪಗೊಂಡಾಗ ಪ್ರತಿಕ್ರಿಯಿಸುವ ಬದಲು ಮೌನವಾಗಿರಬೇಕು, ಏಕೆಂದರೆ ನಿಮ್ಮ ಹೆಂಡತಿಯನ್ನು ಹೊಡೆಯುವುದರಲ್ಲಿ ಅಥವಾ ನಿಮ್ಮ ಹತಾಶೆಯನ್ನು ಅವಳ ಮೇಲೆ ಹೊರಹಾಕುವುದರಲ್ಲಿ ಪುರುಷತ್ವವಿಲ್ಲ ಎಂದು ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಶನಿವಾರ ಹೇಳಿದ್ದಾರೆ.
ಹೈದರಾಬಾದ್ ನಲ್ಲಿ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಿಮ್ಮ ಕೋಪವನ್ನು ನಿಮ್ಮ ಹೆಂಡತಿಯ ಮೇಲೆ ಹೊರಹಾಕುವುದರಲ್ಲಿ ಅಥವಾ ಅವಳ ಮೇಲೆ ಕೈ ಮಾಡುವುದರಲ್ಲಿ ಯಾವುದೇ ಪುರುಷತ್ವವಿಲ್ಲ, ಆದರೆ ಅವಳ ಕೋಪವನ್ನು ಸಹಿಸಿಕೊಳ್ಳುವುದರಲ್ಲಿ ಇದೆ ಎಂದು ಹೇಳಿದರು.
ನಿಮ್ಮ ಹೆಂಡತಿ ಕೋಪಗೊಂಡಾಗ, ನೀವು ಸಹಿಸಿಕೊಳ್ಳಬೇಕು.ಅದು ಪುರುಷತ್ವ.. ನೀವು ಪ್ರವಾದಿ ಮುಹಮ್ಮದ್ ಅವರ ನಿಜವಾದ ಅನುಯಾಯಿಯಾಗಿದ್ದರೆ, ನನಗೆ ಹೇಳಿ, ಪ್ರವಾದಿ ತಮ್ಮ ಜೀವನದಲ್ಲಿ ಎಂದಾದರೂ ಯಾವುದೇ ಮಹಿಳೆಯ ಮೇಲೆ ಕೈ ಮಾಡಿದ್ದಾರೆಯೇ..? ಎಂದು ಪ್ರಶ್ನಿಸಿದರು.
ನಿಮ್ಮ ಬಟ್ಟೆಗಳನ್ನು ಒಗೆಯಲು, ನಿಮಗಾಗಿ ಆಹಾರವನ್ನು ಬೇಯಿಸಲು ಅಥವಾ ನಿಮಗೆ ಬಡಿಸಲು ಕುರಾನ್ ಎಂದೂ ಕೂಡ ಇಸ್ಲಾಂ ಮಹಿಳೆಯರಿಗೆ ಸೂಚನೆ ನೀಡಿಲ್ಲ ಎಂದು ಓವೈಸಿ ತಮ್ಮ ಭಾಷಣದಲ್ಲಿ ಹೇಳಿದರು.
“ನಿಮ್ಮ ಹೆಂಡತಿ ನಿಮ್ಮ ಬಟ್ಟೆಗಳನ್ನು ಒಗೆಯಬೇಕು, ನಿಮಗಾಗಿ ಅಡುಗೆ ಮಾಡಬೇಕು ಎಂದು ಕುರಾನ್ ನಲ್ಲಿ ಎಲ್ಲಿಯೂ ಬರೆಯಲಾಗಿಲ್ಲ. ಗಂಡ ದುಡಿಯುವ ಸಂಬಳದಲ್ಲಿ ಹೆಂಡತಿಗೆ ಪಾಲಿದೆ, ಆದರೆ ಹೆಂಡತಿ ದುಡಿಯುವ ಸಂಬಳದಲ್ಲಿ ಗಂಡನಿಗೆ ಪಾಲಿಲ್ಲ ಎಂದು ಹೇಳಿದರು.