ದೀಪಾವಳಿಯಲ್ಲಿ ಧನ್ತೇರಸ್ ಹಬ್ಬ ಆಚರಣೆ ಮಾಡಲಾಗುತ್ತದೆ. ಆ ದಿನ ವಸ್ತುಗಳ ಖರೀದಿಗೆ ವಿಶೇಷ ಮಹತ್ವವಿದೆ. ಆರ್ಥಿಕ ವೃದ್ಧಿ, ಮನೆಯಲ್ಲಿ ಸುಖ, ಶಾಂತಿ ಬಯಸುವ ಜನರು ಧನ್ತೇರಸ್ ದಿನ ಬೆಳ್ಳಿ, ಬಂಗಾರ ಸೇರಿದಂತೆ ಅಮೂಲ್ಯ ಲೋಹಗಳ ಖರೀದಿ ಮಾಡ್ತಾರೆ.
ಹಿಂದೂ ಧರ್ಮದಲ್ಲಿ ಧನ್ತೇರಸ್ ಬಗ್ಗೆ ಹೇಳಲಾಗಿದೆ. ಈ ದಿನ ಎಲ್ಲ ರಾಶಿಯವರೂ ಚಿನ್ನ ಖರೀದಿ ಮಾಡ್ಬೇಕು ಅಂತಿಲ್ಲ. ನಿಮ್ಮ ರಾಶಿಗೆ ಅನುಗುಣವಾಗಿ ನಿಮಗೆ ಶುಭತರುವ ವಸ್ತುಗಳನ್ನು ನೀವು ಖರೀದಿ ಮಾಡ್ಬಹುದು.
ಧನ್ತೇರಸ್ ದಿನ ಯಾವ ರಾಶಿಯವರು ಏನು ಖರೀದಿ ಮಾಡಬೇಕು? :
ಧನ್ತೇರಸ್ ದಿನ ಮೇಷ, ವೃಷಭ ಮತ್ತು ಮೀನ ರಾಶಿಯ ಜನರು ಬಂಗಾರ ಖರೀದಿ ಮಾಡುವುದು ಒಳ್ಳೆಯದು. ಇದು ನಿಮ್ಮ ಜೀವನದಲ್ಲಿ ಸುಖವನ್ನು ತರುತ್ತದೆ. ಸಂತೋಷದ ಜೀವನಕ್ಕೆ ಇದು ದಾರಿಮಾಡಿಕೊಡುತ್ತದೆ.
ಇನ್ನು ಮಿಥುನ, ಕರ್ಕ, ಸಿಂಹ, ಕನ್ಯಾ ಮತ್ತು ತುಲಾ ರಾಶಿಯವರು ಧನ್ತೇರಸ್ ದಿನ ಬಂಗಾರ ಖರೀದಿ ಮಾಡ್ಬೇಕಾಗಿಲ್ಲ. ನೀವು ಬೆಳ್ಳಿಯನ್ನು ಖರೀದಿಸುವುದು ಒಳ್ಳೆಯದು. ಈ ದಿನ ನೀವು ಬೆಳ್ಳಿ ಖರೀದಿ ಮಾಡಿ ಮನೆಗೆ ತಂದ್ರೆ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸುತ್ತಾಳೆ.
ವೃಶ್ಚಿಕ, ಧನು ಮತ್ತು ಮಕರ ರಾಶಿಯವರು ಈ ದಿನ ಕಬ್ಬಿಣದ ವಸ್ತುವನ್ನು ಖರೀದಿ ಮಾಡುವುದು ಮಂಗಳಕರ. ಕುಂಭ ರಾಶಿಯವರು ತಾಮ್ರದ ವಸ್ತುವನ್ನು ಖರೀದಿ ಮಾಡ್ಬೇಕು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.