ಮಹಾಶಿವರಾತ್ರಿ. ಶಿವಭಕ್ತರು ಕಾಯುತ್ತಿದ್ದ ಶಿವರಾತ್ರಿ ಬಂದೇ ಬಿಟ್ಟಿದೆ. ಶಿವರಾತ್ರಿ ಎಂದರೆ ಉಪವಾಸ, ಜಾಗರಣೆ, ಅಭಿಷೇಕ, ಜಪ – ತಪ ಎಲ್ಲವೂ ಇರುತ್ತದೆ. ಇವುಗಳನ್ನ ಮಾಡಿದ್ರೆ ಶಿವ ಇಷ್ಟಾರ್ಥ ಸಿದ್ಧಿಸಿ ಸಕಲ ಪಾಪವನ್ನು ಪರಿಹಾರ ಮಾಡುತ್ತಾನೆ ಅನ್ನೋ ನಂಬಿಕೆ ಇದೆ.
ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಉಪವಾಸ, ಜಾಗರಣೆಯನ್ನು ಮಾಡಲು ಕೆಲವರಿಗೆ ಸಾಧ್ಯವಿಲ್ಲ. ಅಂದರೆ ವಯಸ್ಸಾದವರಿಗೆ ಮತ್ತು ಮಕ್ಕಳಿಗೆ ಉಪವಾಸ ಮಾಡುವುದು ಕಷ್ಟ. ಅಂತವರು ಉಪಹಾರವನ್ನು ಸ್ವೀಕರಿಸಿ ಈ ವ್ರತವನ್ನು ಆಚರಿಸಬಹುದು.
ಲಘು ಉಪಹಾರಗಳಾದ ಹಣ್ಣು, ಹಾಲನ್ನು ತೆಗೆದುಕೊಳ್ಳಬಹುದು. ಮೇಲಿಂದ ಮೇಲೆ ನಿಂಬೆ ಹಣ್ಣಿನ ರಸವನ್ನು ತೆಗೆದುಕೊಳ್ಳಬಹುದು. ಇನ್ನು ಉಪವಾಸ ಮಾಡಲು ಸಾಧ್ಯವಾಗದೇ ಇರುವವರು ಸಬ್ಬಕ್ಕಿ ಕಿಚಡಿಯನ್ನು ಸೇವಿಸಬಹುದು. ಈ ರೀತಿಯ ಅಲ್ಪ ಆಹಾರವನ್ನು ಸೇವಿಸಿ ಉಪವಾಸವನ್ನು ಮಾಡಬಹುದು.
ಇನ್ನು ಜಾಗರಣೆ ಮಾಡ ಬಯಸುವವರು ದೇವಸ್ಥಾನಕ್ಕೆ ಹೋಗಿ ಜಪ ಮಾಡಬಹುದು. ಸಾಧ್ಯವಾಗದೇ ಇರುವವರು ಮನೆಯಲ್ಲಿಯೇ ಪೂಜೆ, ಜಪ ಮಾಡಬಹುದು. ಹೀಗೆ ಶಿವರಾತ್ರಿ ಹಬ್ಬದಂದು ಉಪವಾಸ, ಜಾಗರಣೆ ಮಾಡಿ ಶಿವನನ್ನು ಪ್ರಾರ್ಥಿಸಬಹುದು.