alex Certify ‘ಮೊಬೈಲ್’ ಕಳೆದುಕೊಂಡ ವೇಳೆ ಮಾಡಬೇಕಾದ್ದೇನು ? ಇಲ್ಲಿದೆ ಉಪಯುಕ್ತ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮೊಬೈಲ್’ ಕಳೆದುಕೊಂಡ ವೇಳೆ ಮಾಡಬೇಕಾದ್ದೇನು ? ಇಲ್ಲಿದೆ ಉಪಯುಕ್ತ ಮಾಹಿತಿ

ಮಂಗಳೂರು: ನೀವು ಕಳೆದುಕೊಂಡ ಮೊಬೈಲ್‌ ಫೋನ್‌ ಪತ್ತೆ ಆಗಬೇಕೆ..?, ಹಾಗಾದ್ರೆ ಈ ವಿಧಾನವನ್ನು ಅನುಸರಿಸಿ | Mangaluru: Follow This Simple Steps to Find Your Lost Mobile Phone - Kannada Oneindia

ಪ್ರಸ್ತುತ ದಿನಗಳಲ್ಲಿ ಮೊಬೈಲ್ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿದೆ. ಸ್ಮಾರ್ಟ್ ಫೋನ್ ಮೂಲಕ ಬಹಳಷ್ಟು ಕೆಲಸ ಕಾರ್ಯಗಳನ್ನು ಇರುವ ಜಾಗದಲ್ಲಿಯೇ ಮಾಡಬಹುದಾಗಿದ್ದು, ಒಂದೊಮ್ಮೆ ಮೊಬೈಲ್ ಕಳೆದು ಹೋದ ಸಂದರ್ಭದಲ್ಲಿ ಪರಿತಪಿಸಬೇಕಾಗುತ್ತದೆ. ಅಂತಹ ವೇಳೆ ಮಾಡಬೇಕಾದ್ದೇನು ಎಂಬುದರ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

ಮೊದಲಿಗೆ ನೀವು ಮತ್ತೊಂದು ಮೊಬೈಲ್ ನಲ್ಲಿ ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ KSR (Karnataka state police) ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ.

ಬಳಿಕ ಈ ಅಪ್ಲಿಕೇಶನ್ ನಲ್ಲಿ E lost ಆಯ್ಕೆ ಮಾಡಿಕೊಂಡು ಅದರಲ್ಲಿ ನಿಮ್ಮ ಹೆಸರು, ವಿಳಾಸ, ಜಿಲ್ಲೆ, ಮೊಬೈಲ್ ನಂಬರ್ ನೋಂದಾಯಿಸಬೇಕಾಗುತ್ತದೆ.

ನಂತರ Next Option ನಲ್ಲಿ ನೀವು ಕಳೆದುಕೊಂಡ ಮೊಬೈಲ್ ನ ಬಿಲ್ ಇದ್ದರೆ ಅದನ್ನು ಅಪ್ಲೋಡ್ ಮಾಡಬೇಕಾಗುತ್ತದೆ. ಬಿಲ್ ಇರದಿಂದ ಪಕ್ಷದಲ್ಲಿ ಮೊಬೈಲ್ನ ಐಎಂಇಐ ಸಂಖ್ಯೆ ಸಂಖ್ಯೆ ಇರುವ ಫೋಟೋವನ್ನು ಅಪ್ಲೋಡ್ ಮಾಡಿ ನಂತರ ಮೊಬೈಲ್ ಕಳೆದು ಹೋದ ದಿನಾಂಕ, ಸಮಯ, ಸ್ಥಳ ಮೊದಲಾದವನ್ನು ನಮೂದಿಸಿ submit button ಕ್ಲಿಕ್ ಮಾಡಿ. ಅಲ್ಲದೆ ದೂರಿನ ಅರ್ಜಿಯನ್ನು ಪಡೆದುಕೊಳ್ಳಿ.

ಅಲ್ಲದೆ ನಿಮ್ಮ ಮೊಬೈಲ್ ನಂಬರ್ ಸರ್ವಿಸ್ ಪ್ರೊವೈಡರ್ ಕೇಂದ್ರವನ್ನು ಸಂಪರ್ಕಿಸಿ ಕಳೆದು ಹೋದ ಮೊಬೈಲ್ ನಲ್ಲಿದ್ದ ಸಿಮ್ ಕಾರ್ಡ್ ನ ನಂಬರ್ನ ಮತ್ತೊಂದು ಸಿಮ್ ಪಡೆದುಕೊಳ್ಳಿ. ಇದರಿಂದ ಬೇರೆಯವರು ದುರುಪಯೋಗ ಪಡೆದುಕೊಳ್ಳುವ ಸಾಧ್ಯತೆಯನ್ನು ತಡೆಗಟ್ಟಿದಂತಾಗುತ್ತದೆ. ಅದಕ್ಕೂ ಮುನ್ನ ಕಳೆದು ಹೋದ ಮೊಬೈಲ್ ನಂಬರ್ ಬ್ಲಾಕ್ ಮಾಡಿಸುವುದನ್ನು ಮರೆಯಬೇಡಿ.

ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಕೂಡ ಈಗ ಕಳೆದುಕೊಂಡ ಮೊಬೈಲ್ ಪತ್ತೆಗೆ ವೆಬ್ಸೈಟ್ ಆರಂಭಿಸಿದ್ದು, ಇದಕ್ಕಾಗಿ www.ceir.gov.in ಗೆ ಭೇಟಿ ನೀಡಬೇಕಾಗುತ್ತದೆ. ನಂತರ ಇದರಲ್ಲಿ block stolen last option ಆಯ್ಕೆ ಮಾಡಿಕೊಂಡು ಇದರಲ್ಲಿ ಕಳೆದುಕೊಂಡ ಮೊಬೈಲಿನ ಐಎಂಇಐ ಸಂಖ್ಯೆ, ಮೊಬೈಲ್ ಸಂಖ್ಯೆ, ಮೊಬೈಲ್ ಬ್ರಾಂಡ್, ಮೊಬೈಲ್ ಮಾಡೆಲ್ ಮೊದಲಾದ ವಿವರಗಳನ್ನು ಭರ್ತಿ ಮಾಡಿ, ಅಲ್ಲದೆ E lost ದೂರಿನ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಜೊತೆಗೆ ನಿಮಗೆ ಸರ್ಕಾರ ನೀಡಿರುವ ಯಾವುದಾದರೊಂದು ಗುರುತಿನ ಚೀಟಿಯನ್ನು ಅಪ್ಲೋಡ್ ಮಾಡಿ ನೀವು ನೀಡುವ ಮೊಬೈಲ್ ಸಂಖ್ಯೆಗೆ ಬಂದ ಒಟಿಪಿಯನ್ನು ಹಾಕಿ submit ಬಟನ್ ಕ್ಲಿಕ್ ಮಾಡಬೇಕು.

ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ 18 ಸಂಖ್ಯೆಯುಳ್ಳ request ಬರಲಿದ್ದು, ಇದರಿಂದ ಕಳೆದುಕೊಂಡ ಮೊಬೈಲಿನ ಐಎಂಇಐ ನಂಬರ್ ಬ್ಲಾಕ್ ಆಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...