ಐಪಿಎಲ್ ಟ್ರೋಫಿ ಮೇಲಿದೆ ಸಂಸ್ಕೃತ ಭಾಷೆಯ ಅದ್ಭುತ ಸಂದೇಶ….! 28-05-2023 5:29PM IST / No Comments / Posted In: Latest News, Live News, Sports ಐಪಿಎಲ್ 2023ರ ಫೈನಲ್ ಪಂದ್ಯಕ್ಕೆ ಕ್ಷಣಗಣನೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಸವಾಲಿನಲ್ಲಿ ಗೆಲ್ಲೋದು ಯಾರು ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿದೆ. ಪಂದ್ಯದಲ್ಲಿ ಗೆದ್ದವರು ಐಪಿಎಲ್ 2023 ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುತ್ತಾರೆ ಮತ್ತು ಐಪಿಎಲ್ ಟ್ರೋಫಿಯನ್ನು ಪಡೆಯುತ್ತಾರೆ. ಐಪಿಎಲ್ ಟ್ರೋಫಿಯು ಅದ್ಭುತ ವಿನ್ಯಾಸವನ್ನು ಹೊಂದಿದ್ದು ವಿಶ್ವದ ಅತ್ಯಂತ ಸುಂದರವಾದ ಟ್ರೋಫಿಗಳಲ್ಲಿ ಒಂದಾಗಿದೆ. ಅದರಲ್ಲಿ ಸಂಸ್ಕೃತದಲ್ಲಿ ಕೆತ್ತಲಾದ ಸ್ಪೂರ್ತಿದಾಯಕ ಸಂದೇಶವೂ ಇದೆ. “ಯತ್ರ ಪ್ರತಿಭಾ ಅವಸರ ಪ್ರಾಪ್ನೋತಿಹಿ” ಎಂದರೆ “ಪ್ರತಿಭೆ ಇದ್ದಲ್ಲಿ ಅವಕಾಶ ಪ್ರಾಪ್ತಿಯಾಗುತ್ತದೆ” ಎಂಬ ಸಂದೇಶವಿದೆ. ಇದು ಐಪಿಎಲ್‌ನ ಮುಖ್ಯ ಧ್ಯೇಯವಾಗಿದೆ. ಯುವ ಪ್ರತಿಭಾವಂತರ ಆಟಗಾರರಿಗೆ ಐಪಿಎಲ್ ಕ್ರೆಕೆಟ್ ಆಟದ ಅವಕಾಶ ನೀಡಿದೆ. This Sanskrit phrase "𝐘𝐚𝐭𝐫𝐚 𝐏𝐫𝐚𝐭𝐢𝐛𝐡𝐚 𝐀𝐯𝐬𝐚𝐫𝐚 𝐏𝐫𝐚𝐩𝐧𝐨𝐭𝐢𝐡𝐢" written on the IPL Trophy means "Where Talent meets Opportunity". And this is the motto of IPL ~IPLfacts38 #iplfacts pic.twitter.com/2pKQJE0Tbz — Ranjeet Singh (@ranjeetsmile) May 9, 2023