ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಚಿತ್ರವಾದ ವಿಡಿಯೋ ವೈರಲ್ ಆಗಿದ್ದು, ಮದುವೆಯಲ್ಲಿ ಅತ್ತಿಗೆ ತನ್ನ ಮೈದುನನ ಮೇಲೆ ಅತಿಯಾದ ಪ್ರೀತಿಯನ್ನು ಪ್ರದರ್ಶಿಸುವ ದೃಶ್ಯ ಸೆರೆಯಾಗಿದೆ.
ಈ ವಿಡಿಯೋದಲ್ಲಿ, ಮದುವೆಯ ವೇದಿಕೆಯಲ್ಲಿ ಕುಳಿತಿದ್ದ ವರನನ್ನು ಅಪ್ಪಿಕೊಂಡ ಆತನ ಅತ್ತಿಗೆ ಮುತ್ತು ಕೊಡುವ ದೃಶ್ಯ ಕಂಡುಬಂದಿದೆ. ಈ ದೃಶ್ಯವು ಸಾಮಾಜಿಕ ಮಾಧ್ಯಮದಲ್ಲಿ ಹಲವು ಚರ್ಚೆಗಳಿಗೆ ಕಾರಣವಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋವನ್ನು ಹಂಚಿಕೊಂಡ ಬಳಿಕ ಅನೇಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಈ ನಡವಳಿಕೆಯನ್ನು ಅನುಚಿತ ಎಂದು ಟೀಕಿಸಿದರೆ, ಮತ್ತೆ ಕೆಲವರು ಇದನ್ನು ಹಾಸ್ಯವೆಂದು ಪರಿಗಣಿಸಿದ್ದಾರೆ.
View this post on Instagram