ಭಕ್ತರು ದೇವಾಲಯ ಪ್ರವೇಶಿಸುತ್ತಿದ್ದಂತೆಯೇ ಮಾಡುವ ಮೊದಲ ಕೆಲಸ ಘಂಟೆ ಬಾರಿಸುವುದು. ಅಲ್ಲದೇ ದೇವರಿಗೆ ಆರತಿ ಮಾಡುವ ವೇಳೆ ಘಂಟಾನಾದ ನಿರಂತರವಾಗಿ ಮೊಳಗುತ್ತಿರುತ್ತದೆ. ದೇವಾಲಯಗಳಲ್ಲಿ ಘಂಟೆ ಮೊಳಗಿಸುವುದರ ಮಹತ್ವ ಇಲ್ಲಿದೆ ನೋಡಿ.
ಘಂಟೆಯನ್ನು ಸಾಮಾನ್ಯವಾಗಿ ಹಿತ್ತಾಳೆಯಿಂದ ತಯಾರಿಸುತ್ತಾರೆ. ದೇವಾಲಯ ಪ್ರವೇಶಿಸುವ ಭಕ್ತರು ಘಂಟೆ ಬಾರಿಸಿದಾಗ ಅವರಲ್ಲಿ ಭಕ್ತಿ ಭಾವ ಮೂಡುತ್ತದೆ. ಜೊತೆಗೆ ಆರತಿ ವೇಳೆ ನಿರಂತರವಾಗಿ ಘಂಟೆ ಬಾರಿಸುವುದರಿಂದ ಏಕಾಗ್ರತೆ ಮೂಡುತ್ತದೆ ಎಂಬ ಕಾರಣಕ್ಕೆ ಘಂಟೆ ಮೊಳಗಿಸಲಾಗುತ್ತದೆ.
ಜೊತೆಗೆ ಘಂಟೆ ಬಾರಿಸಿದಾಗ ‘ಓಂ’ ಎಂಬ ನಿನಾದದಂತೆ ಇದು ಕೇಳಿಸುವ ಕಾರಣ ಭಕ್ತರ ಮನಸ್ಸಿನಲ್ಲಿ ಒಂದು ರೀತಿಯ ಶಾಂತತೆ ನೆಲೆಸುತ್ತದೆ ಎಂಬ ಮಾತಿದೆ. ಆನಾದಿ ಕಾಲದಿಂದಲೂ ದೇವಾಲಯಗಳಲ್ಲಿ ಘಂಟಾ ನಾದ ಮೊಳಗುತ್ತಿದ್ದು, ಈ ನಿನಾದ ಭಕ್ತರ ಮನಸ್ಸಿಗೆ ಶಾಂತಿ, ನೆಮ್ಮದಿ ತರುತ್ತದೆ ಎಂದು ಹೇಳಲಾಗುತ್ತದೆ.