ವಿಶ್ವದಾದ್ಯಂತ ಅನೇಕ ಬಗೆಯ ಚಿನ್ನ-ಬೆಳ್ಳಿ ಮತ್ತು ಇತರ ಲೋಹದ ನಾಣ್ಯಗಳು ಕಂಡುಬರುತ್ತವೆ. ಆದ್ರೆ ಎಲ್ಲ ನಾಣ್ಯಗಳು ಗೋಲಾಕಾರದಲ್ಲಿರುತ್ತವೆ. ಈ ಎಲ್ಲ ನಾಣ್ಯಗಳ ಆಕಾರ ಗೋಲವಾಗಿರಲು ಕಾರಣವೇನು ಗೊತ್ತಾ..?
ನಾಣ್ಯಗಳ ತೂಕ ಮತ್ತು ಮೌಲ್ಯದ ನಡುವೆ ವ್ಯತ್ಯಾಸವಿರುತ್ತದೆ. ಪ್ರಾಚೀನ ಕಾಲದಲ್ಲಿ ಚೌಕದ ಹಾಗೂ ಮಧ್ಯೆ ರಂಧ್ರವಿರುವ ನಾಣ್ಯಗಳಿದ್ದವು. ಆದ್ರೀಗ ಎಲ್ಲ ನಾಣ್ಯಗಳು ಗೋಲಾಕಾರದಲ್ಲಿವೆ. ಆದ್ರೆ ಎಲ್ಲ ನಾಣ್ಯಗಳ ಮೌಲ್ಯ ಭಿನ್ನವಾಗಿರುತ್ತದೆ. 1950 ರಲ್ಲಿ ಮೊದಲ ಬಾರಿ ಗೋಲಾಕಾರದ 1 ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಲಾಗಿತ್ತು.
2010 ರಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 2 ಮತ್ತು 5 ರೂಪಾಯಿ ನಾಣ್ಯಗಳನ್ನು ನೀಡಲಾಯಿತು. ಇವುಗಳಲ್ಲಿ ಒಂದು ಬದಿಯಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟದ ಲಾಂಛನ ಮತ್ತು ಇನ್ನೊಂದು ಬದಿಯಲ್ಲಿ ಅಶೋಕ ಸ್ತಂಭವಿತ್ತು. ಏಕೆ ನಾಣ್ಯಗಳು ದುಂಡಗಿರುತ್ತವೆ ಎಂಬುದಕ್ಕೆ ಯಾವುದೇ ದೃಢವಾದ ಪುರಾವೆಗಳಿಲ್ಲ. ಆದರೆ ದುಂಡಗಿನ ನಾಣ್ಯಗಳನ್ನು ಸಂಗ್ರಹಿಸಿ ಎಣಿಸುವುದು ಸುಲಭ ಎಂದು ಹೇಳಲಾಗುತ್ತದೆ. ಆದ್ದರಿಂದ ನಾಣ್ಯಗಳ ಎಲ್ಲಾ ಆಕಾರಗಳನ್ನು ಬದಿಗಿಟ್ಟು, ದುಂಡಗೆ ಮಾಡಲಾಗಿದೆ.
ಹಿಂದಿನ ಕಾಲದಲ್ಲಿ ತೂಕಕ್ಕೆ ತಕ್ಕಂತೆ ನಾಣ್ಯಗಳಿಗೆ ಮೌಲ್ಯ ನೀಡಲಾಗ್ತಿತ್ತು. ಬೇರೆ ಆಕಾರದ ನಾಣ್ಯಗಳನ್ನು ಕತ್ತರಿಸಿ ಅದ್ರ ಮೌಲ್ಯ ಬದಲಿಸಬಹುದಿತ್ತು. ಆದ್ರೆ ದುಂಡಗಿನ ನಾಣ್ಯಗಳನ್ನು ಕತ್ತರಿಸಿ ಮೌಲ್ಯ ಕಡಿಮೆ ಮಾಡುವುದು ಸಾಧ್ಯವಿಲ್ಲ.