ಕೆಲವು ಬಾರಿ ನೀವು ಬಟ್ಟೆ ಒಗೆದು ಆರಿಸಿ ಒಣಗಿಸಿ ಮಡಿಚಿಡುವಾಗ ಮತ್ತೆ ಕೆಟ್ಟ ವಾಸನೆ ಬೀರಿದ ಅನುಭವವಾಗಬಹುದು. ಇದಕ್ಕೆ ಕಾರಣ ಹಾಗೂ ಪರಿಹಾರಗಳನ್ನು ನೋಡೋಣ.
ಕೆಲವೊಮ್ಮೆ ನೀವು ಬಳಸಿದ ಬಟ್ಟೆಯ ಗುಣಮಟ್ಟದ ಸಮಸ್ಯೆಯೂ ಕಾರಣವಿರಬಹುದು. ಅಂತಹ ಸಂದರ್ಭದಲ್ಲಿ ಆ ಬಟ್ಟೆಯನ್ನು ಗುರುತಿಸಿ ಪ್ರತ್ಯೇಕವಾಗಿ ತೊಳೆದು ಒಣಹಾಕಿ. ಇದರಿಂದ ಉಳಿದೆಲ್ಲಾ ಬಟ್ಟೆಗಳಿಗೂ ಅದರ ವಾಸನೆ ಹಬ್ಬುವುದನ್ನು ತಪ್ಪಿಸಬಹುದು.
ವಾಷಿಂಗ್ ಮೆಷಿನ್ ನಲ್ಲಿ ತೊಳೆದ ಬಳಿಕ ತೆಗೆಯದೆ ಹೆಚ್ಚು ಹೊತ್ತು ಅದರಲ್ಲೇ ಬಿಡುವುದರಿಂದಲೂ ಬಟ್ಟೆಗಳು ದುರ್ನಾತ ಬೀರಲು ಆರಂಭಿಸುತ್ತವೆ. ಹಾಗಾಗಿ ಬಟ್ಟೆ ಒಗೆದಾದ ತಕ್ಷಣ ಅದರಿಂದ ಹೊರ ತೆಗೆದು ಗಾಳಿಯಾಡಲು ಹಾಕಿ ಬಿಡಿ.
ಕೆಲವೊಮ್ಮೆ ನೀವು ಬಳಸಿದ ಡಿಟರ್ಜೆಂಟ್ ಪ್ರಮಾಣ ಕಡಿಮೆಯಾದರೆ ಅಥವಾ ವಿಪರೀತ ಹೆಚ್ಚಾದರೆ ಹೀಗೆ ಕಮಟು ವಾಸನೆ ಬೀರಬಹುದು. ಸೋಪಿನ ಪುಡಿ ಅಥವಾ ಲಿಕ್ವಿಡ್ ಹಾಕುವ ಜಾಗವನ್ನು ಹದಿನೈದು ದಿನಕ್ಕೊಮ್ಮೆ ಸ್ವಚ್ಛಗೊಳಿಸಿ. ಅಲ್ಲೇ ನಿಲ್ಲುವ ಡಿಟರ್ಜೆಂಟ್ ನಿಮ್ಮ ಬಟ್ಟೆ ಕೆಟ್ಟ ವಾಸನೆ ಬೀರುವಂತೆ ಮಾಡಬಹುದು.