ಸಿಹಿ ತಿನ್ನಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಪದೇ ಪದೇ ಸಿಹಿ ತಿನ್ನಬೇಕೆಂದು ಬಯಸುವುದು ದೇಹಕ್ಕೆ ಸಮಸ್ಯೆಯನ್ನುಂಟು ಮಾಡುತ್ತದೆ. ಹಾಗಾಗಿ ಇದಕ್ಕೆ ಕಾರಣವೇನೇಂಬುದನ್ನು ತಿಳಿದು ಪರಿಹರಿಸಿಕೊಳ್ಳಿ.
ದೇಹ ಹೆಚ್ಚು ಸಿಹಿ ತಿನ್ನಲು ಬಯಸುತ್ತಿದ್ದರೆ ಅದಕ್ಕೆ ಪ್ರೋಟೀನ್ ಕೊರತೆಯೇ ಕಾರಣ. ಹಾಗಾಗಿ ನಿಮ್ಮ ಊಟದಲ್ಲಿ ಹೆಚ್ಚಾಗಿ ಪ್ರೋಟೀನ್ ಸೇರಿಸಿ. ಪ್ರೋಟೀನ್ ಹಸಿವಿಗೆ ಕಾರಣವಾಗುವಂತಹ ಹಾರ್ಮೋನ್ ಉತ್ಪಾದನೆಗೆ ಸಹಕರಿಸುತ್ತದೆ. ಇದರಿಂದ ಬಯಕೆ ಕಡಿಮೆಯಾಗುತ್ತದೆ.
ನಾವು ಸಿಹಿ ಸೇವಿಸಿದಾಗಲೆಲ್ಲಾ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಇದರಿಂದ ದೇಹದಲ್ಲಿ ಇನ್ಸುಲಿನ್ ಬಿಡುಗಡೆಯಾಗುತ್ತದೆ. ಈ ಇನ್ಸುಲಿನ್ ದೇಹದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಆಗ ಸಕ್ಕರೆ ಮಟ್ಟ ಕಡಿಮೆಯಾಗಿ ದೇಹಕ್ಕೆ ಸಿಹಿ ಬಯಕೆ ಹೆಚ್ಚಾಗುತ್ತದೆ. ಇದನ್ನು ಸರಿಪಡಿಸಲು ಪ್ರೋಟೀನ್ ಸಹಕಾರಿ.
ಹಾಗಾಗಿ ಪ್ರತಿದಿನ ಉತ್ತಮ ಆಹಾರ ಸೇವಿಸಿ. ಸರಿಯಾಗಿ ನೀರನ್ನು ಕುಡಿಯಿರಿ. ಯಾಕೆಂದರೆ ನಿರ್ಜಲೀಕರಣ ಹಸಿವನ್ನು ಹೆಚ್ಚಿಸುತ್ತದೆ. ಸಿಹಿ ತಿನ್ನುವ ಬಯಕೆಯಾದಾಗ ಹಣ್ಣುಗಳು, ತರಕಾರಿಗಳನ್ನು ಸೇವಿಸಿ.