alex Certify ಗೂಗಲ್, ಮೈಕ್ರೋಸಾಫ್ಟ್‌ನಂತಹ ದೈತ್ಯ ಟೆಕ್ ಕಂಪನಿಗಳ CEOಗಳ ವಿದ್ಯಾರ್ಹತೆ ಎಷ್ಟು…..? ಇಲ್ಲಿದೆ ಡಿಟೇಲ್ಸ್‌……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೂಗಲ್, ಮೈಕ್ರೋಸಾಫ್ಟ್‌ನಂತಹ ದೈತ್ಯ ಟೆಕ್ ಕಂಪನಿಗಳ CEOಗಳ ವಿದ್ಯಾರ್ಹತೆ ಎಷ್ಟು…..? ಇಲ್ಲಿದೆ ಡಿಟೇಲ್ಸ್‌……!

ಗೂಗಲ್, ಮೈಕ್ರೋಸಾಫ್ಟ್ ಸೇರಿದಂತೆ ವಿಶ್ವದ ಅನೇಕ ದಿಗ್ಗಜ ಕಂಪನಿಗಳನ್ನು ಭಾರತೀಯ ಮೂಲದ ವ್ಯಕ್ತಿಗಳೇ ಮುನ್ನಡೆಸುತ್ತಿದ್ದಾರೆ. ಈ ದೈತ್ಯ ಕಂಪನಿಗಳ ಸಿಇಓಗಳು ಎಷ್ಟು ವಿದ್ಯಾವಂತರು ಗೊತ್ತಾ?  ಅವರು ಯಾವ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ? ಏನೇನು ಅಧ್ಯಯನ ಮಾಡಿದ್ದಾರೆ ಎಂಬುದನ್ನು ವಿವರವಾಗಿ ನೋಡೋಣ. ವಿಶ್ವದ ಪ್ರಮುಖ ಟೆಕ್ ಕಂಪನಿಗಳ ಸಿಇಓಗಳ ಶೈಕ್ಷಣಿಕ ಅರ್ಹತೆ ಇಲ್ಲಿದೆ.

ಸುಂದರ್ ಪಿಚೈ: ಗೂಗಲ್ ಮತ್ತು ಆಲ್ಫಾಬೆಟ್ ಸಿಇ

ಭಾರತೀಯ ಮೂಲದ ಸುಂದರ್ ಪಿಚೈ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಸ್ಕೂಲ್‌ನಿಂದ ಎಂಬಿಎ ಪದವಿ ಪಡೆದುಕೊಂಡಿದ್ದಾರೆ. 2004 ರಲ್ಲಿ ಸುಂದರ್‌ ಪಿಚೈ Googleಗೆ ಸೇರಿದರು. Chrome, Chrome OS ಮತ್ತು Google ಡ್ರೈವ್‌ನಂತಹ ಉತ್ಪನ್ನಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. 2013 ರಲ್ಲಿ ಆಂಡ್ರಾಯ್ಡ್‌ನ ಹಿರಿಯ ಉಪಾಧ್ಯಕ್ಷರಾದರು.

ಸತ್ಯ ನಾಡೆಲ್ಲಾ: ಮೈಕ್ರೋಸಾಫ್ಟ್ ಸಿಇ

ಭಾರತದ ಹೈದರಾಬಾದ್‌ನಲ್ಲಿ ಜನಿಸಿದ ಸತ್ಯ ನಾಡೆಲ್ಲಾ ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಮತ್ತು ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು 1992 ರಲ್ಲಿ ಮೈಕ್ರೋಸಾಫ್ಟ್ ಸೇರಿದರು. ಮೈಕ್ರೋಸಾಫ್ಟ್ ಸಿಇಓ ಆಗುವ ಮೊದಲು ಕ್ಲೌಡ್ ಮತ್ತು ಎಂಟರ್‌ಪ್ರೈಸ್ ವಿಭಾಗದ ಮುಖ್ಯಸ್ಥರಾಗಿದ್ದರು.

ನೀಲ್ ಮೋಹನ್: YouTube CEO

ಯೂಟ್ಯೂಬ್ ಸಿಇಓ ನೀಲ್ ಮೋಹನ್ ತಮ್ಮ ಬಾಲ್ಯವನ್ನು ಅಮೆರಿಕದ ಮಿಚಿಗನ್ ಮತ್ತು ಫ್ಲೋರಿಡಾದಲ್ಲಿ ಕಳೆದಿದ್ದಾರೆ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದುಕೊಂಡಿದ್ದಾರೆ. ನೀಲ್‌ ಮೋಹನ್ ಗೂಗಲ್‌ನಲ್ಲಿ ಡಿಸ್‌ಪ್ಲೇ ಮತ್ತು ವಿಡಿಯೋ ಜಾಹೀರಾತು ಉತ್ಪನ್ನಗಳ ಉಪಾಧ್ಯಕ್ಷರಾಗಿದ್ದರು. ನಂತರ ಯೂಟ್ಯೂಬ್‌ನ ಸಿಇಒ ಹುದ್ದೆಗೇರಿದರು.

ಜಯಶ್ರೀ ಉಳ್ಳಾಲ್: ಅರಿಸ್ಟಾ ನೆಟ್‌ವರ್ಕ್ಸ್‌ CEO

ಜಯಶ್ರೀ ಉಳ್ಳಾಲ್ ಅವರು ಪ್ರಸಿದ್ಧ ಉದ್ಯಮಿ. ಅಸಿಸ್ಟಾ ನೆಟ್‌ವರ್ಕ್‌ನ ಸಿಇಓ ಹುದ್ದೆಯಲ್ಲಿದ್ದಾರೆ. ಅವರು ಸ್ಯಾನ್ ಫ್ರಾನ್ಸಿಸ್ಕೋ ಸ್ಟೇಟ್ ಯೂನಿವರ್ಸಿಟಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. 1993 ರಲ್ಲಿ ಅವರು ಸಿಸ್ಕೋ ಸಿಸ್ಟಮ್ಸ್‌ಗೆ ಸೇರಿದರು ಮತ್ತು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದರು. 2008 ರಲ್ಲಿ ಅರಿಸ್ಟಾ ನೆಟ್‌ವರ್ಕ್ಸ್‌ನ ಅಧ್ಯಕ್ಷರು ಮತ್ತು CEO ಆದರು.

ಶಾಂತನು ನಾರಾಯಣ: ಅಡೋಬ್‌ CEO

ಅಡೋಬ್ ಸಿಇಓ ಶಾಂತನು ನಾರಾಯಣ್ ಅವರು ಭಾರತದ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ನಂತರ ಅವರು ಅಮೇರಿಕಾದಲ್ಲಿ ಅಧ್ಯಯನ ಮಾಡಿದರು. ಅವರು ಅಡೋಬ್‌ಗೆ ಸೇರುವ ಮೊದಲು ಆಪಲ್ ಮತ್ತು ಸಿಲಿಕಾನ್ ಗ್ರಾಫಿಕ್ಸ್‌ನಲ್ಲಿ ಕೆಲಸ ಮಾಡಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...