alex Certify PCOD ಮತ್ತು PCOS ನಡುವಿನ ವ್ಯತ್ಯಾಸವೇನು ? ಮಹಿಳೆಯರಲ್ಲಿ ಈ ಸಮಸ್ಯೆಗಳನ್ನು ಗುರುತಿಸುವುದು ಹೇಗೆ ? ಇಲ್ಲಿದೆ ಡಿಟೇಲ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

PCOD ಮತ್ತು PCOS ನಡುವಿನ ವ್ಯತ್ಯಾಸವೇನು ? ಮಹಿಳೆಯರಲ್ಲಿ ಈ ಸಮಸ್ಯೆಗಳನ್ನು ಗುರುತಿಸುವುದು ಹೇಗೆ ? ಇಲ್ಲಿದೆ ಡಿಟೇಲ್ಸ್‌

ಪ್ರಪಂಚದಾದ್ಯಂತ ಮಹಿಳೆಯರನ್ನು ಕಾಡುತ್ತಿರುವ ಅನೇಕ ರೋಗಗಳಿವೆ. PCOD ಮತ್ತು PCOS ಕೂಡ ಇವುಗಳಲ್ಲೊಂದು. ಅನೇಕರಿಗೆ PCOD ಮತ್ತು PCOS ನಡುವಿನ ವ್ಯತ್ಯಾಸ ತಿಳಿದಿಲ್ಲ. ಪರಿಣಾಮ ತಮ್ಮ ರೋಗಲಕ್ಷಣಗಳನ್ನು ಸ್ವತಃ ಗುರುತಿಸಲು ಸಾಧ್ಯವಾಗುವುದಿಲ್ಲ. ಕಾಯಿಲೆ ಗಂಭೀರ ಸ್ವರೂಪ ಪಡೆದಾಗ ಅದು ಬೆಳಕಿಗೆ ಬರುತ್ತದೆ. PCOD ಮತ್ತು PCOS ನಡುವಿನ ವ್ಯತ್ಯಾಸವೇನು ? ಇವುಗಳ ರೋಗಲಕ್ಷಣಗಳೇನು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಗತ್ಯ.

PCOD ಎಂದರೇನು ?

‘ಪಾಲಿಸಿಸ್ಟಿಕ್ ಓವರಿ ಡಿಸೀಸ್’ ಎಂದೂ ಕರೆಯಲ್ಪಡುವ ಪಿಸಿಓಡಿ, ಮಹಿಳೆಯರಲ್ಲಿ ಸಾಮಾನ್ಯ ಸ್ಥಿತಿಯಾಗಿದೆ. ಅಂಡಾಶಯಗಳು ಅಕಾಲಿಕವಾಗಿ ಮೊಟ್ಟೆಗಳನ್ನು ಬಿಡುಗಡೆ ಮಾಡುತ್ತವೆ, ಅದು ನಂತರ ಚೀಲಗಳಾಗಿ ಬದಲಾಗುತ್ತದೆ. ತೂಕ ಹೆಚ್ಚಾಗುವುದು, ಒತ್ತಡ ಮತ್ತು ಹಾರ್ಮೋನ್ ಬದಲಾವಣೆಗಳು ಇದಕ್ಕೆ ಕಾರಣವಾಗಿರಬಹುದು. PCOD ಸಂದರ್ಭದಲ್ಲಿ ಅಂಡಾಶಯಗಳು ತಮ್ಮ ಸಾಮಾನ್ಯ ಗಾತ್ರಕ್ಕಿಂತ ದೊಡ್ಡದಾಗುತ್ತವೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಈಸ್ಟ್ರೊಜೆನ್ ಅನ್ನು ಬಿಡುಗಡೆ ಮಾಡುತ್ತವೆ. ಇದು ಮಹಿಳೆಯರ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ.

PCOD ಗುರುತಿಸುವುದು ಹೇಗೆ ?

ಪೀರಿಯಡ್ಸ್‌ ಅಕಾಲಿಕವಾಗಿದ್ದರೆ ಅಥವಾ ತಡವಾಗಿ ಬರುತ್ತಿದ್ದರೆ ಅದು ಕೂಡ ಪಿಸಿಓಡಿ ಲಕ್ಷಣವಿರಬಹುದು. ಮುಟ್ಟು ಸಮಯಕ್ಕಿಂತ ಮೊದಲು ಅಥವಾ ತುಂಬಾ ತಡವಾಗಿ ಬಂದರೆ ವೈದ್ಯರನ್ನು ಸಂಪರ್ಕಿಸಬೇಕು. ಮುಖ, ಹೊಟ್ಟೆ ಮತ್ತು ಬೆನ್ನು ಮುಂತಾದ ದೇಹದ ಭಾಗಗಳಲ್ಲಿ ಕೂದಲು ಬೆಳೆಯುವುದು ಕೂಡ ಈ ಕಾಯಿಲೆಯ ಲಕ್ಷಣವಾಗಿರಬಹುದು.

ಅನಿಯಮಿತ ತೂಕ ಹೆಚ್ಚಾಗುವುದು ಅಥವಾ ಕಳೆದುಕೊಳ್ಳುವುದು ಕೂಡ ಪಿಸಿಓಡಿ ಲಕ್ಷಣವಾಗಿದೆ. ಚರ್ಮದ ಮೇಲೆ ಮೊಡವೆ ಮತ್ತು ಎಣ್ಣೆಯ ಅಂಶ ಹೆಚ್ಚಾಗುತ್ತದೆ. ಸ್ವಲ್ಪ ಕೆಲಸ ಮಾಡಿದರೂ ಆಯಾಸವಾಗುವುದು, ಏನನ್ನೂ ಮಾಡದಿದ್ದರೂ ಸಹ ದಣಿದ ಭಾವನೆ ಉಂಟಾಗುವುದು ಕೂಡ ಪಿಸಿಓಡಿ ಲಕ್ಷಣಗಳಲ್ಲೊಂದು.

PCOS ಎಂದರೇನು ?

ಪಿಸಿಓಎಸ್ ಅನ್ನು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಎಂದೂ ಕರೆಯುತ್ತಾರೆ. ಇದು ಪಿಸಿಓಡಿಗಿಂತ ಹೆಚ್ಚು ಗಂಭೀರ ಮತ್ತು ಅಪಾಯಕಾರಿಯಾದ ಒಂದು ರೀತಿಯ ಅಸ್ವಸ್ಥತೆಯಾಗಿದೆ. ಇದು ಹೆಚ್ಚಿನ ಚಯಾಪಚಯ ಮತ್ತು ಹಾರ್ಮೋನುಗಳ ಅಸಮತೋಲನದ ಸ್ಥಿತಿ. ಪಿಸಿಓಎಸ್‌ ಗರ್ಭಧಾರಣೆಯ ಮೇಲೆ ಪರಿಣಾಮ ಬೀರಬಹುದು.

PCOS ಅನ್ನು ಗುರುತಿಸುವುದು ಹೇಗೆ ?

PCOD ಮತ್ತು PCOS  ಬಹುತೇಕ ಸಾಮಾನ್ಯ ರೋಗಲಕ್ಷಣಗಳನ್ನೇ ಹೊಂದಿವೆ. ಇದರಿಂದಾಗಿ ಅವುಗಳ ನಡುವಣ ವ್ಯತ್ಯಾಸವನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಪಿಸಿಓಎಸ್‌ ಸಮಸ್ಯೆ ಇದ್ದರೆ ಋತುಚಕ್ರ ಅನಿಯಮಿತವಾಗಿರುತ್ತದೆ. ವಿಪರೀತ ರಕ್ತಸ್ರಾವ ಅಥವಾ ರಕ್ತಸ್ರಾವ ಬಹಳ ಕಡಿಮೆ ಇರಬಹುದು. ಚರ್ಮದ ಮೇಲೆ ಕಪ್ಪು ಕಲೆಗಳಾಗಬಹುದು. ಪಿಸಿಓಎಸ್ ಸಮಸ್ಯೆ ಇರುವ ಮಹಿಳೆಯರಲ್ಲಿ ಬಂಜೆತನ ಸಮಸ್ಯೆಯ ಸಾಧ್ಯತೆ ಹೆಚ್ಚಾಗಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...