ಬೆಂಗಳೂರು : ಟ್ರಾಫಿಕ್ ಜಾಮ್’ ಉಂಟಾಗಲು ಕಾರಣವೇನು..? ಒಂದು ವಾಕ್ಯದಲ್ಲಿ ಉತ್ತರಿಸಿ ಬಹುಮಾನ ಪಡೆಯಿರಿ ಎಂದು ಯಶವಂತಪುರ ಟ್ರಾಫಿಕ್ ಪೊಲೀಸ್ ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಮುಖ ರಸ್ತೆಗಳಲ್ಲಿ 12 ಕಾರಿಡಾರ್ ನಿರ್ಮಿಸಲು ರಾಜ್ಯ ಸರ್ಕಾರ ಮಾಸ್ಟರ್ ಪ್ಲಾನ್ ಹಾಕಿದೆ. ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ವಿಶೇಷ ಆಯುಕ್ತರನ್ನು ನೇಮಿಸಲಾಗಿದ್ದು, ಸಂಚಾರ ದಟ್ಟಣೆಯನ್ನು ಬಹಳಷ್ಟು ಕಡಿಮೆ ಮಾಡಲಾಗಿದೆ.ಇದೀಗ ಇದರ ನಡುವೆ ಟ್ರಾಫಿಕ್ ಜಾಮ್’ ಉಂಟಾಗಲು ಕಾರಣವೇನು..? ಒಂದು ವಾಕ್ಯದಲ್ಲಿ ಉತ್ತರಿಸಿ ಬಹುಮಾನ ಪಡೆಯಿರಿ ಎಂದು ಯಶವಂತಪುರ ಟ್ರಾಫಿಕ್ ಪೊಲೀಸ್ ಟ್ವೀಟ್ ಮಾಡಿದ್ದು, ಟ್ವೀಟ್ ಗೆ ಹಲವು ರೀತಿಯಾದ ಪ್ರತಿಕ್ರಿಯೆಗಳು ಬರುತ್ತಿದೆ.
ಪೊಲೀಸ್ ಟ್ವೀಟ್
ಮೇಷ್ಟ್ರು:ಟ್ರಾಫಿಕ್ ಜಾಮ್ ಗಳು ಉಂಟಾಗಲು ಕಾರಣಗಳೇನು ಮತ್ತು ಅವುಗಳನ್ನು ಹೇಗೆ ನಿವಾರಿಸಬಹುದು? (1 ವಾಕ್ಯದಲ್ಲಿ ಉತ್ತರಿಸಿ) ಬುದ್ದಿವಂತ ವಿದ್ಯಾರ್ಥಿಗಳು ಈ ಕೂಡಲೇ ಉತ್ತರಿಸಬಹುದು.. (ಪ್ರತಿಯೊಬ್ಬರೂ ಸಹ ವಿದ್ಯಾರ್ಥಿಗಳೇ ಅಂಬೋದು ಸತ್ಯ ಅಲ್ವಾ ) “ಅತ್ಯೂತ್ತಮ ಉತ್ತರದ ಮಾಲೀಕರಿಗೆ ನಮ್ಮೊಟ್ಟಿಗೆ ಠಾಣೆಯಲ್ಲಿ ಕಾಫಿ ಕುಡಿಯುವ ಅವಕಾಶ ಉಂಟು”