ತಾಯ್ತನ ಪ್ರತಿ ಮಹಿಳೆಯ ಕನಸು. ಮಹಿಳೆಗೆ ಇದು ಅತ್ಯಂತ ಸುಂದರ ಅನುಭವ. ಕುಟುಂಬಸ್ಥರು ಮನೆಗೆ ಬರುವ ಅತಿಥಿಯನ್ನು ಪ್ರೀತಿಯಿಂದ ಸ್ವಾಗತಿಸುತ್ತಾರೆ. ಮಗು ಮನೆಯ ವಾತಾವರಣವನ್ನು ಬದಲಾಯಿಸುತ್ತದೆ.
ಈ ಖುಷಿ, ಸಮಯವಲ್ಲದ ಸಮಯದಲ್ಲಿ ಬಂದರೆ ತಾಯಿ ಹಾಗೂ ಹುಟ್ಟುವ ಮಗುವಿನ ಮೇಲೆ ಅನೇಕ ಪರಿಣಾಮ ಬೀರುತ್ತದೆ. ಹಾಗಾಗಿ ಗರ್ಭಿಣಿಯಾಗುವ ಮೊದಲು ಕೆಲವೊಂದು ವಿಷಯಗಳನ್ನು ಮಹಿಳೆ ತಿಳಿದುಕೊಳ್ಳುವ ಅವಶ್ಯಕತೆ ಇದೆ.
ಅಂಡಾಣು ಉತ್ಪತ್ತಿ ಸಮಯ
ತಿಂಗಳ ಮುಟ್ಟಿನ ಬಗ್ಗೆ ಸರಿಯಾಗಿ ನೆನಪಿಟ್ಟುಕೊಳ್ಳಬೇಕು. ಮುಟ್ಟಾದ ಏಳು ದಿನದ ನಂತರ ಹಾಗೂ ಕೊನೆಯಲ್ಲಿ ಏಳು ದಿನಗಳ ಒಳಗೆ ಅಂಡೋತ್ಪತ್ತಿಯಾಗುತ್ತದೆ.
ಸರಿಯಾದ ವಯಸ್ಸು
ಮೊದಲೆಲ್ಲ ಅತಿ ಬೇಗ ಮದುವೆ ಮಾಡಿಬಿಡುತ್ತಿದ್ದರು. ಈಗ ಕಾಲ ಬದಲಾಗಿದೆ. ಮದುವೆ ವಯಸ್ಸು ಹೆಚ್ಚಾಗಿದೆ. ಮದುವೆಯಾದ ನಂತರ ದಂಪತಿ ಮತ್ತೆರಡು ವರ್ಷಗಳ ಕಾಲ ಮಕ್ಕಳ ಬಗ್ಗೆ ಚಿಂತಿಸುವುದಿಲ್ಲ. ಆದರೆ 22-28 ಸರಿಯಾದ ವಯಸ್ಸು. ಈ ವಯಸ್ಸಿನಲ್ಲಿ ಮಹಿಳೆಯರು ಮಾನಸಿಕ ಹಾಗೂ ದೈಹಿಕವಾಗಿ ಅಮ್ಮನಾಗಲು ತಯಾರಿರುತ್ತಾರೆ.
ಆರೋಗ್ಯ
ಮಕ್ಕಳ ಬಗ್ಗೆ ನೀವು ಚಿಂತಿಸುತ್ತಿದ್ದರೆ ಮೊದಲು ವೈದ್ಯರನ್ನು ಭೇಟಿಯಾಗಿ ಬನ್ನಿ. ಗರ್ಭಿಣಿಯಾಗುವ ಮೊದಲು ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವುದು ಮುಖ್ಯ. ವೈದ್ಯರ ಸಲಹೆ ಮೇರೆಗೆ ಗರ್ಭ ಧರಿಸಿದರೆ, ಮುಂದಾಗಬಹುದಾದ ತೊಂದರೆಗಳನ್ನು ತಪ್ಪಿಸಬಹುದು.