ಯೋಗ ಬೆಳಿಗ್ಗೆಯೇ ಮಾಡಬೇಕೆಂಬುದು ಕಡ್ಡಾಯವಲ್ಲ. ದಿನದ ಯಾವುದೇ ಹೊತ್ತಿನಲ್ಲಿ ಯೋಗ ಮಾಡಬಹುದು. ಆದರೆ ಖಾಲಿ ಹೊಟ್ಟೆಯಲ್ಲಿ ಮಾಡಿದರೆ ಇದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು.
ಬೆಳಗೆದ್ದು ಯೋಗ ಮಾಡುವುದರಿಂದ ಶರೀರಕ್ಕೆ ಉಲ್ಲಾಸ ದೊರೆಯುತ್ತದೆ. ದಿನವಿಡೀ ನಿಮ್ಮನ್ನು ಫ್ರೆಶ್ ಆಗಿ ಇಡುತ್ತದೆ. ನಿಮ್ಮ ಮೂಡ್ ಅನ್ನು ಬದಲಾಯಿಸಿ ಲವಲವಿಕೆಯಿಂದ ಕೆಲಸ ಮಾಡುವಂತೆ ನೋಡಿಕೊಳ್ಳುತ್ತದೆ.
ಯಾವುದೇ ದೈಹಿಕ ಮಾನಸಿಕ ನೋವುಗಳಿದ್ದರೆ ಅವುಗಳನ್ನು ಯೋಗ ದೂರಮಾಡುತ್ತದೆ. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ. ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತದೆ.
ಅದೇ ಸಂಜೆ ವೇಳೆ ನೀವು ಯೋಗ ಮಾಡುವವರಾದರೆ ಕಚೇರಿಯಿಂದ ಕೆಲಸ ಮಾಡಿ ಬಂದ ಸುಸ್ತು ನಿಮ್ಮನ್ನು ಕಾಡಬಹುದು. ಹಸಿವಿನ ಮಧ್ಯೆ ಯೋಗಕ್ಕೆ ಮನಸ್ಸಿಡಲು ಸಾಧ್ಯವಾಗದಿರಬಹುದು. ಮಾನಸಿಕ ಒತ್ತಡ ಅಥವಾ ನಿದ್ದೆ ನಿಮ್ಮನ್ನು ಕಾಡಬಹುದು. ಹಾಗಾಗಿ ಬೆಳಗಿನ ಸಮಯವೇ ಯೋಗಕ್ಕೆ ಹೆಚ್ಚು ಸೂಕ್ತ.