ವಾಕಿಂಗ್ ವ್ಯಾಯಾಮ ಮಾಡಲು ಸುಲಭವಾದ ಮಾರ್ಗಗಳಲ್ಲಿ ಒಂದಾಗಿದೆ. ಇದು ನಿಮ್ಮನ್ನು ಸಕ್ರಿಯವಾಗಿರಿಸುತ್ತದೆ. ಆದರೆ, ಬೆಳಿಗ್ಗೆ ವಾಕಿಂಗ್ ಮಾಡುವುದಕ್ಕಿಂತ ಊಟದ ನಂತರ ವಾಕಿಂಗ್ ಮಾಡುವುದು ಹೆಚ್ಚು ಪ್ರಯೋಜನಕಾರಿ ಎಂದು ತಜ್ಞರು ಹೇಳುತ್ತಾರೆ.
ಕ್ಲಿನಿಕಲ್ ಪೌಷ್ಟಿಕ ತಜ್ಞೆ ಡಾ.ರಿಧಿ ಪಟೇಲ್, ಮಾರ್ಚ್ 21 ರಂದು ಇನ್‌ಸ್ಟಾಗ್ರಾಮ್‌ನಲ್ಲಿ ವಾಕಿಂಗ್ ಮಾಡುವ ಸಮಯವನ್ನು ಹಂಚಿಕೊಂಡಿದ್ದಾರೆ. ಬೆಳಿಗ್ಗೆ ವಾಕಿಂಗ್ ಮಾಡುವುದಕ್ಕಿಂತ ಊಟದ ನಂತರ 10 ನಿಮಿಷ ನಡೆಯುವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಅವರು ಹೇಳಿದ್ದಾರೆ.
ಊಟವಾದ ನಂತರ, ಅಂದರೆ, ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟವಾದ 10 ನಿಮಿಷದ ನಡಿಗೆ, ಬೆಳಗ್ಗೆ ಮಾಡುವ ದೀರ್ಘ ನಡಿಗೆಗಿಂತ ಎರಡು ಪಟ್ಟು ಹೆಚ್ಚು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಎಂದು ಡಾ.ರಿಧಿ ವಿವರಿಸಿದ್ದಾರೆ.
ಊಟದ ನಂತರ ವಾಕಿಂಗ್ ಮಾಡುವುದರಿಂದ ಆಗುವ ಪ್ರಯೋಜನಗಳು:
- ಜೀರ್ಣಕ್ರಿಯೆಗೆ ಸಹಾಯಕವಾಗಿದೆ.
- ಊಟದ ನಂತರದ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಡಯಾಬಿಟಿಸ್ ಇರುವವರಿಗೆ ಇದು ತುಂಬಾ ಪ್ರಯೋಜನಕಾರಿ.
- ದಿನನಿತ್ಯದ ವಾಕಿಂಗ್ ಗುರಿಗಳನ್ನು ಸಾಧಿಸಲು ಅನುಕೂಲವಾಗುತ್ತದೆ.
- ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
ಪ್ರತಿದಿನದ ದಿನಚರಿಯಲ್ಲಿ, ಪ್ರತಿ ಊಟದ ನಂತರ 10 ನಿಮಿಷ ವಾಕಿಂಗ್ ಮಾಡುವುದನ್ನು ರೂಢಿಸಿಕೊಳ್ಳಿ. 10,000 ಹೆಜ್ಜೆಗಳನ್ನು ಒಂದೇ ಬಾರಿಗೆ ನಡೆಯುವ ಬದಲು, ಊಟವಾದ ನಂತರ ವಿಂಗಡಿಸಿ ನಡೆಯಿರಿ. ಇದರಿಂದ ಡಬಲ್ ಪ್ರಯೋಜನ ಪಡೆಯಬಹುದು ಎಂದು ತಜ್ಞರು ಹೇಳಿದ್ದಾರೆ.
View this post on Instagram