
ತೂಕ ನಷ್ಟಕ್ಕೆ ಕೆಲವರು ಗ್ರೀನ್ ಟೀಯನ್ನು ಸೇವಿಸುತ್ತಾರೆ. ಇದು ಉರಿಯೂತದ ಗುಣಗಳನ್ನು ಹೊಂದಿದ್ದು, ಇದು ತೂಕವನ್ನು ಬಹಳ ಬೇಗ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಆದರೆ ತೂಕ ಕಳೆದುಕೊಳ್ಳಲು ಗ್ರೀನ್ ಕಾಫಿ ಕೂಡ ಸಹಕಾರಿ ಎನ್ನಲಾಗಿದೆ.
ಹಾಗಾದ್ರೆ ತೂಕ ನಷ್ಟಕ್ಕೆ ಗ್ರೀನ್ ಟೀ ಮತ್ತು ಗ್ರೀನ್ ಕಾಫಿಯಲ್ಲಿ ಯಾವುದು ಬೆಸ್ಟ್ ಎಂಬುದನ್ನುತಿಳಿದುಕೊಳ್ಳಿ.
ಗ್ರೀನ್ ಕಾಫಿ ಇದು ದೇಹದ ಚಯಾಪಚಯ ಕ್ರಿಯೆಯನ್ನು ನಿಯಂತ್ರಣದಲ್ಲಿಡುತ್ತದೆ. ಇದು ಕೊಬ್ಬನ್ನು ವೇಗವಾಗಿ ಸುಡಲು ಸಹಾಯ ಮಾಡುತ್ತದೆ.
ಹಾಗೇ ಗ್ರೀನ್ ಟೀ ಇದರಲ್ಲಿ ಕಡಿಮೆ ಪ್ರಮಾಣದ ಕೆಫೀನ್ ಇದೆ. ಇದು ನರಮಂಡಲವನ್ನು ಉತ್ತೇಜಿಸುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದೇಹದಲ್ಲಿನ ಕೊಬ್ಬನ್ನು ಕರಗಿಸಲು ಮತ್ತು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ.
ಹಾಗಾಗಿ ತೂಕ ಇಳಿಸಿಕೊಳ್ಳಲು ಗ್ರೀನ್ ಟೀ ಮತ್ತು ಗ್ರೀನ್ ಕಾಫಿ ಎರಡೂ ಕೂಡ ಸಹಕಾರಿ. ಇವೆರಡೂ ಕೂಡ ದೇಹದಲ್ಲಿನ ವಿಷವನ್ನು ಹೊರಹಾಕಿ ಕೊಬ್ಬನ್ನು ಸುಡಲು ಸಹಕಾರಿಯಾಗಿದೆ. ಆದ ಕಾರಣ ಗ್ರೀನ್ ಟೀ ಮತ್ತು ಗ್ರೀನ್ ಕಾಫಿಯನ್ನು ಸರಿಯಾದ ಆಹಾರ ಮತ್ತು ವ್ಯಾಯಾಮದ ಜೊತೆ ಸೇವಿಸಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು.