ಶಿವಮೊಗ್ಗ : ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರಾಹುಲ್ ಗಾಂಧಿ ಜಾತಿ ಯಾವುದು..? ಮಿಶ್ರತಳಿನಾ, ಬೆರಕೆಯಾ..? ಎಂದು ಪ್ರಶ್ನೆ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿರುವ ಈಶ್ವರಪ್ಪ ‘ದೇಶದ ಜನ ಪ್ರಧಾನಿಗಳ ಜಾತಿ ನೋಡಿಲ್ಲ. ರಾಹುಲ್ ಗಾಂಧಿ ನೀವು ಯಾವ ಜಾತಿ. ಮಿಶ್ರತಳಿ, ಬೆರಕೆನಾ? ಇದನ್ನು ನಾನು ಹೇಳುತ್ತಿಲ್ಲ ಜನ ಹೇಳ್ತಿದ್ದಾರೆ ಎಂದರು. ನಿಮ್ಮಜ್ಜಿ ಇಂದಿರಾಗಾಂಧಿ, ನಿಮ್ಮಜ್ಜ ಪಿರೋಜ್ ಖಾನ್ ಹಾಗಾದರೇ ನಿಮ್ಮ ಜಾತಿ ಯಾವುದು ರಾಹುಲ್ ಗಾಂಧಿಯವರೇ ಎಂದು ಈಶ್ವರಪ್ಪ ವಾಗ್ಧಾಳಿ ನಡೆಸಿದ್ದಾರೆ.
ನರೇಂದ್ರ ಮೋದಿಯವರ ಬಗ್ಗೆ ರಾಹುಲ್ ಗಾಂಧಿ ಮಾತನಾಡ್ತಾರೆ, ರಾಹುಲ್ ಗಾಂಧಿಗೆ ಎಷ್ಟು ಜ್ಞಾನವಿದೆ ಎನ್ನುವುದು ಪರೀಕ್ಷೆ ಮಾಡಬೇಕು, , ರಾಹುಲ್ ಗಾಂಧಿಯವರನ್ನು ಪಕ್ಷದಿಂದ ಕಿತ್ತು ಬಿಸಾಕಿ ಎಂದು ಈಶ್ವರಪ್ಪ ವಾಗ್ಧಾಳಿ ನಡೆಸಿದರು.