ಪ್ರಧಾನಮಂತ್ರಿ ಆವಾಸ್ ಯೋಜನೆ ಎಂದರೇನು ? ಇದರಿಂದ ಸಾಮಾನ್ಯ ನಾಗರಿಕರಿಗೆ ಏನು ಪ್ರಯೋಜನ ? ಎಂಬ ಪ್ರಶ್ನೆ ಹಲವಾರು ಜನರನ್ನು ಕಾಡುತ್ತಿದೆ. ಎಷ್ಟೋ ಜನರು ಇದರ ಸದುಪಯೋಗ ಪಡೆದುಕೊಳ್ಳುವುದು ಹೇಗೆಂಬುದನ್ನು ತಿಳಿಯದೇ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ.
2024 ರ ವೇಳೆಗೆ ಗ್ರಾಮೀಣ ಪ್ರದೇಶದ ಸರ್ವರಿಗೂ ಸೂರು ಎಂಬ ಪರಿಕಲ್ಪನೆಯಲ್ಲಿ 2016 ರ ಏಪ್ರಿಲ್ 1 ರಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆ ಇದು. ಈ ಗಡುವಿನೊಳಗೆ ದೇಶದೆಲ್ಲೆಡೆ ಮೂಲ ಸೌಕರ್ಯಗಳನ್ನು ಒಳಗೊಂಡ 2.95 ಕೋಟಿ ಮನೆಗಳನ್ನು ನಿರ್ಮಾಣ ಮಾಡಿಕೊಡುವ ಉದ್ದೇಶ ಈ ಯೋಜನೆಯದ್ದಾಗಿದೆ. 2022 ರ ಫೆಬ್ರವರಿ 21 ರ ವೇಳೆಗೆ 1.73 ಮನೆಗಳ ನಿರ್ಮಾಣ ಪೂರ್ಣಗೊಂಡಿದ್ದು, ಇನ್ನೂ 2.62 ಕೋಟಿ ಮನೆಗಳ ನಿರ್ಮಾಣ ಹಂತಹಂತವಾಗಿ ಪೂರ್ಣಗೊಳ್ಳಲಿದೆ.
ಅಂದ ಹಾಗೆ ಈ ಯೋಜನೆ ಏನು ? ಇದರ ಪ್ರಯೋಜನ ಪಡೆಯುವ ಬಗೆ ಹೇಗೆಂಬುದನ್ನು ಇಲ್ಲಿ ತಿಳಿದುಕೊಳ್ಳಿ
– PMAY-G ವೆಬ್ ಸೈಟ್ ಹೋಂ ಪೇಜ್ ಓಪನ್ ಮಾಡಿ
– ಮೇಲ್ಭಾಗದಲ್ಲಿ ಕಾಣಿಸುವ “Awaassoft” ಅನ್ನು ಕ್ಲಿಕ್ ಮಾಡಿ
– ನಂತರ ರಿಪೋರ್ಟ್ ಅನ್ನು ಕ್ಲಿಕ್ ಮಾಡಿ
– ಸ್ಕ್ರೀನ್ ನಲ್ಲಿ ನಿಮಗೆ ಹೊಸ ಪೇಜ್ ಕಾಣಿಸುತ್ತದೆ
– H ಸೆಕ್ಷನ್ ಗೆ ಹೋಗಿ “Social Audit Reports” ಹೋಗಿ
– “Beneficiary details for verification” ಅನ್ನು ಕ್ಲಿಕ್ ಮಾಡಿ
– ಈಗ ನಿಮ್ಮ ರಾಜ್ಯ, ಪಂಚಾಯತ್, ಉಪವಿಭಾಗ, ವರ್ಷದ ವಿವರಗಳನ್ನು ಆಯ್ಕೆ ಮಾಡಿ ಮತ್ತು captcha code ಅನ್ನು ಭರ್ತಿ ಮಾಡಿ ಸಬ್ ಮಿಟ್ ಮಾಡಿ.
– ಈಗ ಸಂಪೂರ್ಣವಾದ ಪಟ್ಟಿಯನ್ನು ನೋಡಿ.