ಜನಪ್ರಿಯ ಸಾಮಾಜಿಕ ಮಾಧ್ಯಮಗಲ್ಲಿ ಟಿಕ್ ಟಾಕ್ ಕೂಡ ಒಂದು. ಇದು ಅನೇಕರಿಗೆ ಮನರಂಜನೆಯ ಮೂಲವಾಗಿದೆ. ಇದರಲ್ಲಿ ವಿವಿಧ ರೀತಿಯ ವಿಡಿಯೋಗಳು ವೈರಲ್ ಆಗುತ್ತವೆ. ಇದೀಗ ಈ ಸಾಲಿಗೆ ಮಿಲ್ಕ್ ಕ್ರೇಟ್ ಚಾಲೆಂಜ್ ಸೇರಿಕೊಂಡಿದೆ. ಇದ್ಯಾವುದಪ್ಪಾ ಹೊಸ ಚಾಲೆಂಜ್ ಅಂತೀರಾ…..ಈ ಸ್ಟೋರಿ ಓದಿ
ಹೌದು, ಹಾಲಿನ ಪ್ಯಾಕೆಟ್ ತುಂಬುವ ಪ್ಲಾಸ್ಟಿಕ್ ಕ್ರೇಟ್ ಗಳನ್ನು ಪಿರಮಿಡ್ ರೀತಿಯಲ್ಲಿರಿಸಿ ಅದರ ಮೇಲೆ ಏರುವ ವಿಭಿನ್ನ ಚಾಲೆಂಜ್ ಒಂದು ಸದ್ಯ ಟ್ರೆಂಡ್ ನಲ್ಲಿದೆ. ಮೊದಲಿಗೆ ಇದನ್ನು ಕೆನ್ನೆತ್ ವಾಡೆಲ್ ಎಂಬ ವ್ಯಕ್ತಿಯು ಪ್ರಾರಂಭಿಸಿದ್ದಾನೆ. ಅಂದಿನಿಂದ ಟಿಕ್ ಟಾಕ್ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಬಳಕೆದಾರರು ಈ ಸವಾಲಿನಲ್ಲಿ ಭಾಗವಹಿಸಲು ನಿರ್ಧರಿಸಿದರು. ಒಬ್ಬರಾದ ಮೇಲೆ ಒಬ್ಬರಂತೆ ಸವಾಲು ಸ್ವೀಕರಿಸಿ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ.
ಸುಪ್ರೀಂ ಕೋರ್ಟ್ ಆವರಣದಲ್ಲಿ ಬೆಂಕಿ ಹಚ್ಚಿಕೊಂಡಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಸಾವು
ಪಿರಮಿಡ್ ರೀತಿಯಲ್ಲಿಟ್ಟ ಕ್ರೇಟ್ (ಬಾಕ್ಸ್) ಮೇಲೆ ಹತ್ತಿ ತಮ್ಮ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ವಿಡಿಯೋ ಹಂಚಿಕೊಂಡಿರುವ ವ್ಯಕ್ತಿಯು ಯಶಸ್ವಿಯಾಗಿ ಸವಾಲು ಸ್ವೀಕರಿಸಿದರೆ, ಎಲ್ಲರೂ ಇಷ್ಟೊಂದು ಅದೃಷ್ಟಶಾಲಿಗಳು ಎಂದು ಹೇಳಲಾಗುವುದಿಲ್ಲ. ಯಾಕೆಂದರೆ ಅನೇಕರು ಇದರ ಮೇಲೆ ಹತ್ತಿ ಗಾಯಗೊಂಡಿರುವ ಘಟನೆಯೂ ನಡೆದಿದೆ ಎಂದು ಹೇಳಲಾಗಿದೆ.