ಕೊರೊನಾ ಸಾಂಕ್ರಾಮಿಕದ 3-4 ಅಲೆಗಳನ್ನು ಕಂಡು ಬೇಸತ್ತಿರುವ ಬ್ರಿಟನ್‌ನಲ್ಲಿ ಸದ್ಯ ಅತ್ಯಂತ ಮಾರಣಾಂತಿಕವಾದ ’ಲಸ್ಸಾ ಜ್ವರ’ ಕಾಣಿಸಿಕೊಂಡಿದೆ. ಎಬೊಲಾ ಮಾದರಿಯ ವೈರಾಣುವಿನಿಂದ ಉಂಟಾಗುವ ಲಸ್ಸಾ ಜ್ವರದಿಂದ ಬಾಧಿತ ಸೋಂಕಿತರು ವಿಪರೀತ ಜ್ವರ, ಗುಪ್ತಾಂಗದಲ್ಲಿ ರಕ್ತಸೋರಿಕೆಯಿಂದ ನರಳಾಡುತ್ತಾರೆ. ಅನೇಕರು ಮೃತಪಡುತ್ತಿದ್ದಾರೆ ಕೂಡ. ಪಶ್ಚಿಮ ಆಫ್ರಿಕಾಗೆ ಭೇಟಿ ನೀಡಿ ಮರಳಿದ ಬ್ರಿಟನ್ ಕುಟುಂಬಸ್ಥರಲ್ಲಿ ಲಸ್ಸಾ ಜ್ವರ ಕಾಣಿಸಿಕೊಂಡು ಬ್ರಿಟನ್ ಆರೋಗ್ಯ ಇಲಾಖೆಗೆ ಆತಂಕ ಉಂಟುಮಾಡಿದೆ.
ಈ ಲಸ್ಸಾ ಜ್ವರಕ್ಕೆ ನಿಖರ ಔಷಧ ಲಭ್ಯವಿಲ್ಲ. ಸೋಂಕಿನ ತೀವ್ರತೆಯ ರೋಗ ಲಕ್ಷಣಗಳಿಗೆ ತಕ್ಕಂತೆ ಶಮನಕಾರಿ ಔಷಧಗಳನ್ನು ಕೊಡಲಾಗುತ್ತದೆ ಅಷ್ಟೇ. ದೇಹದ ರೋಗನಿರೋಧಕ ಶಕ್ತಿಯೇ ಲಸ್ಸಾ ಜ್ವರವನ್ನು ಮೆಟ್ಟಿ ನಿಲ್ಲಬೇಕಿದೆ. 1969ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಈ ಜ್ವರ, ಮೊದಲು ಹರಡುವಿಕೆ ಶುರು ಮಾಡುವುದು ಇಲಿಗಳ ಮಲ-ಮೂತ್ರದ ಸಂಪರ್ಕದಿಂದ. ಆಫ್ರಿಕಾದಲ್ಲಿ ಈ ಭಯಾನಕ ಕಾಯಿಲೆಯು ಅಂತ್ಯ ಕಾಣುವ ಸ್ಥಿತಿಯಲ್ಲಿದ್ದರೂ ಇತರ ಕಡೆಗಳಿಗೆ ಹರಡಿದರೆ ಸಾವು-ನೋವು ಹೆಚ್ಚಾಗಿ ಸಂಭವಿಸಲಿದೆ ಎನ್ನುವುದು ವೈದ್ಯರ ಆತಂಕವಾಗಿದೆ.
‘ಪುಷ್ಪಾ’ ಫೀವರ್….! ಸೂರತ್‌ನಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಇರುವ ಸೀರೆಗಳ ಭರ್ಜರಿ ಮಾರಾಟ…..!!
ಡೆಂಗ್ಯೂ, ಎಬೊಲಾ ಜ್ವರದ ಮಾದರಿಯಲ್ಲಿ ರಕ್ತನಾಳಗಳ ತೆಳುವಾದ ಗೋಡೆಗಳನ್ನು ನಾಶಪಡಿಸುತ್ತದೆ ಲಸ್ಸಾ ಜ್ವರದ ವೈರಾಣು. ಇದರಿಂದಾಗಿ ಆಂತರಿಕ ರಕ್ತಸ್ರಾವವಾಗಲು ಶುರುವಾಗುತ್ತದೆ. ವೈರಾಣು ದಾಳಿಯಿಂದ ತೀವ್ರ ಜ್ವರ ಬಾಧಿಸಿ ರಕ್ತಹೆಪ್ಪುಗಟ್ಟುವಿಕೆ ಸಾಮರ್ಥ್ಯವನ್ನು ದೇಹವು ಕಳೆದುಕೊಳ್ಳುತ್ತದೆ. ಕೊನೆಗೆ ಬಹುಅಂಗಾಂಗ ವೈಫಲ್ಯದಿಂದ ಸಾವು ಸಂಭವಿಸುತ್ತದೆ ಎಂದು ಆಫ್ರಿಕಾ ವೈದ್ಯರುಗಳು ಎಚ್ಚರಿಸಿದ್ದಾರೆ. ನೈಜೀರಿಯಾ, ಲಿಬೆರಿಯಾ, ಗಿನಿಯಾ ರಾಷ್ಟ್ರಗಳಲ್ಲಿ ಲಸ್ಸಾ ಜ್ವರಕ್ಕೆ 100 ರಲ್ಲಿ ಒಬ್ಬರು ನಿತ್ಯ ಬಲಿಯಾಗುತ್ತಿದ್ದಾರೆ.