ಮೆಂತ್ಯಕಾಳು ಬಾಯಿಗೆ ಕಹಿ ಎಂಬುದೇನೋ ನಿಜ. ಆದರೆ ರಾತ್ರಿ ವೇಳೆ ಅದನ್ನು ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನ ಸಮೇತ ಸೇವನೆ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತೇ?
ಬಾಣಂತಿಯರು ನಿತ್ಯ ಮೆಂತ್ಯ ಕಾಳನ್ನು ಸೇವಿಸುವುದರಿಂದ ಎದೆಹಾಲು ಹೆಚ್ಚುತ್ತದೆ. ಇದು ತಾಯಿ ಹಾಗೂ ಹಸುಗೂಸಿನ ಆರೋಗ್ಯವನ್ನು ಕಾಪಾಡುತ್ತದೆ.
ಮಲಬದ್ಧತೆ ಸಮಸ್ಯೆ ಇರುವವರು ಮೆಂತೆ ಕಾಳನ್ನು ನಿತ್ಯ ಸೇವಿಸುವುದರಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ದೇಹದ ವಿಷಕಾರಿ ಅಂಶಗಳನ್ನು ಹೊರಹಾಕಿ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ.
ಸಕ್ಕರೆ ಕಾಯಿಲೆ ನಿಯಂತ್ರಣಕ್ಕೂ ಇದು ಸಹಕಾರಿ. ಇದರಲ್ಲಿ ನೈಸರ್ಗಿಕವಾಗಿ ಕರಗುವ ಫೈಬರ್ ಇದ್ದು ಸಕ್ಕರೆ ಅಂಶವನ್ನು ಇದು ಹೀರಿಕೊಳ್ಳುವ ವೇಗವನ್ನು ತಗ್ಗಿಸುತ್ತದೆ.