ಚಳಿಗಾಲದಲ್ಲಿ ಬಿಸಿ ಬಿಸಿ ಟೀ, ಕಾಫಿ ಕುಡಿಯೋದು ಎಲ್ಲರಿಗೂ ಇಷ್ಟ. ಗ್ರೀ ಟೀಯಿಂದ ಹಿಡಿದು ಮಸಾಲೆ ಟೀವರೆಗೆ ಎಲ್ಲ ವೆರೈಟಿ ಟೀ ಕುಡಿಯಲು ಜನರು ಇಷ್ಟಪಡ್ತಾರೆ. ಈ ಬಾರಿ ನೀವು ಹೊಸ ರೆಸಿಪಿ ಟ್ರೈ ಮಾಡಬಹುದು. ದುಬೈನಲ್ಲಿ ಇದು ಹೆಚ್ಚು ಪ್ರಸಿದ್ಧಿ ಪಡೆದಿದೆ. ಈ ಟೀ ಹೆಸರು ಬಿರಿಯಾನಿ ಟೀ.
ಶೆಫ್ ನೇಹಾ ದೀಪಕ್ ಶಾ ಎಂಬುವವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಿರಿಯಾನಿ ಟೀ ಬಗ್ಗೆ ಹೇಳಿದ್ದಾರೆ. ಇದು ದುಬೈನಲ್ಲಿ ಸಾಕಷ್ಟು ಪ್ರಸಿದ್ಧಿಯಾಗಿದ್ದು, ಈ ಟೀ ಕುಡಿಯೋಕೆ ಜನ ಕ್ಯೂನಲ್ಲಿ ನಿಲ್ಲುತ್ತಾರಂತೆ. ನೇಹಾ, ಈ ಟೀ ಮಾಡೋದು ಹೇಗೆ ಎಂಬುದನ್ನೂ ಹೇಳಿದ್ದಾರೆ.
ಬಿರಿಯಾನಿ ಟೀ ಮಾಡಲು ಬೇಕಾಗುವ ಸಾಮಗ್ರಿ :
1/2 ಲೀಟರ್ ನೀರು
2 ದಾಲ್ಚಿನ್ನಿ ತುಂಡು
1 ಸ್ಟಾರ್ ಸೋಂಪು
7 ರಿಂದ 8 ಕರಿಮೆಣಸಿನ ಕಾಳು
4 ಏಲಕ್ಕಿ
1/2 ಟೀ ಚಮಚ ಸೋಂಪು
1/2 ಟೀ ಚಮಚ ಟೀ ಎಲೆ
1 ಚಮಚ ಶುಂಠಿ
2 ಟೀ ಚಮಚ ಜೇನುತುಪ್ಪ
1 ಟೀ ಚಮಚ ನಿಂಬೆ ರಸ
4-5 ಪುದೀನ ಎಲೆ
ಬಿರಿಯಾನಿ ಟೀ ಮಾಡುವ ವಿಧಾನ :
ಒಂದು ಪಾತ್ರೆಗೆ ನೀರನ್ನು ಹಾಕಿ ಕುದಿಸಿ. ಅದಕ್ಕೆ ದಾಲ್ಚಿನ್ನಿ, ಸ್ಟಾರ್ ಸೋಂಪು, ಕರಿಮೆಣಸು, ಏಲಕ್ಕಿ ಮತ್ತು ಸೋಂಪನ್ನು ಹಾಕಿ ಕುದಿಸಿ. ಅದು ಚೆನ್ನಾಗಿ ಕುದ್ದ ಮೇಲೆ ಅದಕ್ಕೆ ಟೀ ಎಲೆಗಳನ್ನು ಹಾಕಿ. ಐದರಿಂದ ಏಳು ನಿಮಿಷ ಕುದಿಯಲು ಬಿಡಿ. ಆ ನಂತ್ರ ಒಂದು ಗ್ಲಾಸ್ ಗೆ ಶುಂಠಿ ರಸ, ಜೇನುತುಪ್ಪ, ನಿಂಬೆ ರಸ ಹಾಗೂ ಪುದೀನಾ ಎಲೆಗಳನ್ನು ಹಾಕಿ ಅದಕ್ಕೆ ಈ ಬಿಸಿ ಬಿಸಿ ಟೀಯನ್ನು ಹಾಕಿ ಸರ್ವ್ ಮಾಡಿ.