alex Certify ಯುವ ವೈದ್ಯೆ ಅತ್ಯಾಚಾರ – ಕೊಲೆ ಪ್ರಕರಣ; ಅರುಣಾ ಶಾನ್ಭೋಗ್ ಪ್ರಕರಣ ಕಳೆದು 50 ವರ್ಷಗಳಾದರೂ ನಮಗೆಲ್ಲಿದೆ ರಕ್ಷಣೆ ಎನ್ನುತ್ತಿರುವ ‘ವೈದ್ಯಕೀಯ ಸಿಬ್ಬಂದಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವ ವೈದ್ಯೆ ಅತ್ಯಾಚಾರ – ಕೊಲೆ ಪ್ರಕರಣ; ಅರುಣಾ ಶಾನ್ಭೋಗ್ ಪ್ರಕರಣ ಕಳೆದು 50 ವರ್ಷಗಳಾದರೂ ನಮಗೆಲ್ಲಿದೆ ರಕ್ಷಣೆ ಎನ್ನುತ್ತಿರುವ ‘ವೈದ್ಯಕೀಯ ಸಿಬ್ಬಂದಿ’

ಕೊಲ್ಕತ್ತಾದ ಅರ್.ಜಿ. ಕರ್ ಆಸ್ಪತ್ರೆಯಲ್ಲಿ ನಡೆದಿರುವ ಯುವ ವೈದ್ಯೆ ಅತ್ಯಾಚಾರ – ಕೊಲೆ ಪ್ರಕರಣ ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಎಲ್ಲೆಡೆ ಪ್ರತಿಭಟನೆ ಶುರುವಾಗಿದೆ. ನಾಳೆ ವೈದ್ಯರು ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು ಈ ವೇಳೆ ಓ ಪಿ ಡಿ ಬಂದ್ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ 50 ವರ್ಷಗಳ ಹಿಂದೆ ನಡೆದಿದ್ದ ನರ್ಸ್ ಅತ್ಯಾಚಾರ ಪ್ರಕರಣವನ್ನು ನೆನಪಿಸಿಕೊಳ್ಳುತ್ತಿರುವ ವೈದ್ಯಕೀಯ ಸಿಬ್ಬಂದಿ, ಇಷ್ಟು ವರ್ಷಗಳಾದರೂ ನಮಗೆ ಎಲ್ಲಿದೆ ರಕ್ಷಣೆ ಎಂದು ಪ್ರಶ್ನಿಸುತ್ತಿದ್ದಾರೆ.

ವೈದ್ಯಕೀಯ ಸಿಬ್ಬಂದಿ ಹಗಲು – ರಾತ್ರಿ ಎನ್ನದೆ ಕೆಲಸ ಮಾಡಬೇಕಿದ್ದು, ಆದರೆ ಅವರಿಗೆ ರಕ್ಷಣೆಗೆ ಬೇಕಾದ ಅಗತ್ಯ ವ್ಯವಸ್ಥೆ ಮಾಡದೆ ನಿರ್ಲಕ್ಷ ಮಾಡಲಾಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದ್ದು, 1973 ರಲ್ಲಿ ಮುಂಬೈನ ಕೆ ಇ ಎಂ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅರುಣಾ ಶಾನ್ಭೋಗ್ ಎಂಬ ಯುವತಿಯ ಮೇಲೆ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಅತ್ಯಾಚಾರ ಎಸಗಿ ಆಕೆಯ ಹತ್ಯೆಗೆ ಯತ್ನಿಸಿದ್ದ. ಈ ಘಟನೆಯನ್ನು ಈಗ ವೈದ್ಯಕೀಯ ಸಿಬ್ಬಂದಿ ಸ್ಮರಿಸುತ್ತಿದ್ದಾರೆ.

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಅರುಣಾ ಶಾನ್ಬೋಗ್ ಅದೇ ಆಸ್ಪತ್ರೆಯ ಕೆಳಭಾಗದಲ್ಲಿ ಇದ್ದ ವಿಶ್ರಾಂತಿ ಕೊಠಡಿಗೆ ತೆರಳಿದ್ದರು. ಇದೇ ಸಂದರ್ಭದಲ್ಲಿ ಆಕೆಯನ್ನು ಹಿಂಬಾಲಿಸಿದ್ದ ವಾರ್ಡ್ ಬಾಯ್ ವಾಲ್ಮೀಕಿ ಎಂಬಾತ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಬಳಿಕ ಕೊಲೆ ಮಾಡಲು ಅರುಣಾ ಶಾನ್ಬೋಗ್ ಅವರ ಕುತ್ತಿಗೆಗೆ ಬಿಗಿದಿದ್ದು, ಇದರ ಪರಿಣಾಮ ಅವರ ಕುತ್ತಿಗೆಯ ನರ ಮೂಳೆ ಮುರಿದಿತ್ತು. ಇದರಿಂದಾಗಿ ಅರುಣಾ ಜೀವಂತ ಶವವಾಗಿ ಬದುಕಬೇಕಾಯಿತು. ಆದರೆ ಕೆಇಎಂ ಆಸ್ಪತ್ರೆಯ ಸಿಬ್ಬಂದಿ ಅರುಣಾ ಅವರ ಜೊತೆಗೆ ನಿಂತಿದ್ದು ಅವರನ್ನು ಕೊನೆ ಕ್ಷಣದವರೆಗೂ ಮಕ್ಕಳಂತೆ ನೋಡಿಕೊಂಡಿದ್ದರು. ಈ ಘಟನೆಯನ್ನು ನೆನಪಿಸಿಕೊಳ್ಳುತ್ತಿರುವ ದೇಶದ ವೈದ್ಯಕೀಯ ಸಿಬ್ಬಂದಿ ಇಂತಹ ಬರ್ಬರ ಘಟನೆ ನಡೆದು ಐವತ್ತು ವರ್ಷಗಳಾದರೂ ನಮಗೆಲ್ಲಿದೆ ರಕ್ಷಣೆ ಎಂದು ಪ್ರಶ್ನಿಸುತ್ತಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...