ಲಾವಾದೊಂದಿಗೆ ಮನುಷ್ಯ ಸಂಪರ್ಕಕ್ಕೆ ಬಂದರೆ ಏನಾಗುತ್ತದೆ ಎಂದು ಯಾರಿಗಾದರೂ ಇಲ್ಲಿಯವರೆಗೆ ಅನ್ನಿಸಿದ್ದರೆ ಅದಕ್ಕೊಂದು ಕುತೂಹಲದ ಉತ್ತರ ಇಲ್ಲಿದೆ. ಈ ಪ್ರಶ್ನೆಗೆ ಉತ್ತರಿಸುವ ಹಳೆಯ ವಿಡಿಯೋ ಒಂದು ಮತ್ತೆ ವೈರಲ್ ಆಗಿದೆ.
ಈ ವಿಡಿಯೋ ತಯಾರಿಕೆಯಲ್ಲಿ ಯಾವುದೇ ಮನುಷ್ಯರಿಗೂ ಹಾನಿಯಾಗಿಲ್ಲ. ಆದ್ದರಿಂದ ಚಿಂತಿಸುವ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಈ ವಿಡಿಯೋ ಶುರುವಾಗುತ್ತದೆ. ಈ ವಿಡಿಯೋದಲ್ಲಿ ಇಥಿಯೋಪಿಯಾದ ಸಕ್ರಿಯ ಜ್ವಾಲಾಮುಖಿಯಾದ ಎರ್ಟಾ ಅಲೆಗೆ 30 ಕಿಲೋಗ್ರಾಂಗಳಷ್ಟು ಸಾವಯವ ತ್ಯಾಜ್ಯವನ್ನು ಎಸೆದಾಗ ಅದು ಏನಾಗುತ್ತದೆ ಎಂದು ತೋರಿಸಲಾಗಿದೆ.
ಮೊದಲಿಗೆ, ಕರಗಿದ ಲಾವಾ ನಂತರ ತನ್ನ ಸ್ವರೂಪವನ್ನು ತೋರಿಸಲು ಪ್ರಾರಂಭಿಸುತ್ತದೆ. ಲಾವಾ ಸರೋವರಕ್ಕೆ ಪ್ರವೇಶಿಸಿದ ಬಳಿಕ ಅದರಲ್ಲಿರುವ ಸಾವಯವ ಪದಾರ್ಥವು ಕಾರಂಜಿ ಗುಳ್ಳೆಗಳನ್ನು ಹೊರಹೊಮ್ಮುವಂತೆ ಮಾಡುತ್ತದೆ ಮತ್ತು ಅವು ಬೆಳೆಯುತ್ತಲೇ ಇರುವುದನ್ನು ವಿಡಿಯೋದಲ್ಲಿ ನೋಡಬಹುದು.
ಸಾವಯವ ತ್ಯಾಜ್ಯದ ಬಂಡಲ್ ಅನ್ನು ಜ್ವಾಲಾಮುಖಿಗೆ ಎಸೆದವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಹೀಗ ಮಾಡಿರುವುದು ಸರಿಯಾದುದಲ್ಲ ಎಂದು ಹಲವರು ಹೇಳಿದ್ದಾರೆ. ಕೆಲವರು ತಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿದೆ ಎಂದೂ ಹೇಳಿದ್ದಾರೆ.