alex Certify ವ್ಯಕ್ತಿಯ ಸಾವಿನ ನಂತರ ಆಧಾರ್ ಸಂಖ್ಯೆಯನ್ನ ಸರ್ಕಾರ ಏನು ಮಾಡುತ್ತೆ…..? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಕ್ತಿಯ ಸಾವಿನ ನಂತರ ಆಧಾರ್ ಸಂಖ್ಯೆಯನ್ನ ಸರ್ಕಾರ ಏನು ಮಾಡುತ್ತೆ…..? ಇಲ್ಲಿದೆ ಮಾಹಿತಿ

ಆಧಾರ್ ಕಾರ್ಡ್ ಅಗತ್ಯ ದಾಖಲೆಯಾಗಿದೆ. ಸರ್ಕಾರಿ ಯೋಜನೆ ಲಾಭ ಸೇರಿದಂತೆ ಖಾಸಗಿಯ ಕೆಲ ಸೇವೆಗಳಿಗೆ ಈಗ ಆಧಾರ್ ಕಡ್ಡಾಯವಾಗಿದೆ. ಕೊರೊನಾ ಲಸಿಕೆಯನ್ನು ಪಡೆಯುವ ಸಂದರ್ಭದಲ್ಲಿ ಆಧಾರ್​ ಕಾರ್ಡ್​ ಅತ್ಯಗತ್ಯ.

ಆಧಾರ್ ಕಾರ್ಡ್ ಪಡೆದ ವ್ಯಕ್ತಿ ಸಾವನ್ನಪ್ಪಿದ್ರೆ ಆತನ ಆಧಾರ್ ಏನಾಗುತ್ತದೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುವುದು ಸಹಜ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಲೋಕಸಭೆಯಲ್ಲಿ ಇತ್ತಿಚೆಗೆ ಸವಿಸ್ತಾರವಾಗಿ ಹೇಳಿದ್ದಾರೆ. ಅವರು ಹೇಳುವ ಪ್ರಕಾರ, ವ್ಯಕ್ತಿಯ ಸಾವಿನ ನಂತರ ಆತನ ಆಧಾರ್ ನಿಷ್ಕ್ರಿಯಗೊಳಿಸಲಾಗುವುದಿಲ್ಲ. ಆಧಾರ್ ರದ್ದುಗೊಳಿಸಲು ಯಾವುದೇ ವ್ಯವಸ್ಥೆ ಇಲ್ಲ ಸತ್ತ ವ್ಯಕ್ತಿಯ ಆಧಾರ್ ಸಂಖ್ಯೆಯನ್ನು ರದ್ದುಗೊಳಿಸಲು ಸದ್ಯಕ್ಕೆ ಯಾವುದೇ ಆಪ್ಷನ್​ ಇಲ್ಲ ಎಂದು ಸಚಿನ ರಾಜೀವ್​ ಚಂದ್ರಶೇಖರ್ ಹೇಳಿದ್ದಾರೆ.

ಜನನ ಮತ್ತು ಮರಣದ ರಿಜಿಸ್ಟ್ರಾರ್ ಜೊತೆಗೆ ಜನನ ಮತ್ತು ಸಾವಿನ ಅಂಕಿಅಂಶಗಳು ಸರ್ಕಾರದ ಬಳಿಗೆ ಸುರಕ್ಷಿತವಾಗಿರುತ್ತೆ. ಯಾವುದೇ ವ್ಯಕ್ತಿಯ ಆಧಾರ್ ಅನ್ನು ನಿಷ್ಕ್ರಿಯಗೊಳಿಸುವಂತಹ ಯಾವುದೇ ವ್ಯವಸ್ಥೆ ಸರ್ಕಾರದ ಬಳಿ ಇಲ್ಲ. ಹಾಗೇನಾದರೂ ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳುವ ವ್ಯವಸ್ಥೆ ಜಾರಿಯಾಗಿದ್ದೇ ಆದಲ್ಲಿ, ಜನರು ಯುಐಡಿಎಐನೊಂದಿಗೆ ಸತ್ತವರ ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳಲು ಪ್ರಾರಂಭಿಸುತ್ತಾರೆ. ಆಧಾರ್ ನಿಷ್ಕ್ರಿಯಗೊಳಿಸಿದ್ರೆ ಅಥವಾ ಮರಣ ಪ್ರಮಾಣಪತ್ರದೊಂದಿಗೆ ಲಿಂಕ್ ಮಾಡಿದ್ರೆ ಆಧಾರ್ ಮಾಲೀಕರ ಸಾವಿನ ನಂತರ ಅದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...