alex Certify ಪ್ರತಿದಿನ ಸೇಬು ತಿನ್ನುವ ಬದಲು ಆಪಲ್‌ ಜ್ಯೂಸ್‌ ಕುಡಿದರೆ ಏನಾಗುತ್ತದೆ……? ಇಲ್ಲಿದೆ ಡಿಟೇಲ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ ಸೇಬು ತಿನ್ನುವ ಬದಲು ಆಪಲ್‌ ಜ್ಯೂಸ್‌ ಕುಡಿದರೆ ಏನಾಗುತ್ತದೆ……? ಇಲ್ಲಿದೆ ಡಿಟೇಲ್ಸ್‌

ದಿನಕ್ಕೊಂದು ಸೇಬು ತಿನ್ನಿ, ವೈದ್ಯರನ್ನು ದೂರವಿಡಿ ಅನ್ನೋ ಮಾತಿದೆ. ಪ್ರತಿದಿನ ಒಂದು ಸೇಬು ತಿಂದರೆ ವೈದ್ಯರ ಬಳಿ ಹೋಗುವ ಅಗತ್ಯವಿರುವುದಿಲ್ಲ, ಈ ಹಣ್ಣು ಅಷ್ಟು ಆರೋಗ್ಯಕಾರಿ ಎನ್ನುವುದು ಈ ಮಾತಿನ ಮರ್ಮ. ಸೇಬು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ.

ಕೆಲವರು ಹಣ್ಣು ತಿನ್ನಲು ಬಯಸುವುದಿಲ್ಲ, ಬದಲಾಗಿ ಸೇಬಿನ ಜ್ಯೂಸ್‌ ಕುಡಿಯುತ್ತಾರೆ. ಆಪಲ್‌ ಜ್ಯೂಸ್‌ ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಸೇಬು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಪ್ರತಿದಿನ ಒಂದು ಲೋಟ ಜ್ಯೂಸ್ ಕುಡಿಯುವುದರಿಂದ ದೇಹವನ್ನು ಅನೇಕ ರೋಗಗಳಿಂದ ರಕ್ಷಿಸಬಹುದು.

ಬೆಳಗಿನ ಉಪಾಹಾರಕ್ಕೆ ಸೇಬು ತಿನ್ನುವ ಬದಲು ಅದರ ರಸವನ್ನು ಕುಡಿಯಬಹುದು. ಇದನ್ನು ಕುಡಿಯುವುದರಿಂದ ಮುಖಕ್ಕೆ ಹೊಳಪು ಬರುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಸೇಬಿನ ರಸವು ಅದನ್ನು ನಿಯಂತ್ರಿಸುತ್ತದೆ. ಸೇಬಿನಲ್ಲಿ ಎಂಟಿಒಕ್ಸಿಡೆಂಟ್‌ಗಳು ತುಂಬಾ ಹೆಚ್ಚಿವೆ. ಆದ್ದರಿಂದ  ಕೊಲೆಸ್ಟ್ರಾಲ್‌ ಸಮಸ್ಯೆ ಇರುವವರು ಪ್ರತಿದಿನ ಸೇಬಿನ ಜ್ಯೂಸ್ ಕುಡಿಯಬೇಕು.

ಸೇಬು ಹಣ್ಣಿನಲ್ಲಿರುವ ವಿಟಮಿನ್ ಎ, ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿ. ಪ್ರತಿನಿತ್ಯ ಜ್ಯೂಸ್ ಕುಡಿದರೆ ಕಣ್ಣಿಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದ ಪಾರಾಗಬಹುದು. ದೃಷ್ಟಿಶಕ್ತಿಯೂ ಹೆಚ್ಚುತ್ತದೆ.

ಸೇಬು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ಪಾಲಿ-ಫೀನಾಲ್ ಮತ್ತು ಫ್ಲೇವನಾಯ್ಡ್‌ಗಳನ್ನು ಸಹ ಒಳಗೊಂಡಿದೆ. ಹಾಗಾಗಿ  ಹೃದಯಕ್ಕೆ ತುಂಬಾ ಒಳ್ಳೆಯದು. ಪ್ರತಿದಿನ ಜ್ಯೂಸ್ ಕುಡಿದರೆ ದೇಹದಲ್ಲಿ ಪೊಟ್ಯಾಶಿಯಂ ಕೊರತೆಯಾಗುವುದಿಲ್ಲ.

ರೋಗನಿರೋಧಕ ಶಕ್ತಿ ದುರ್ಬಲಗೊಂಡಾಗ ಜನರು ಬೇಗನೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಪ್ರತಿದಿನ ಆಪಲ್‌ ಜ್ಯೂಸ್‌ ಕುಡಿಯಿರಿ. ವಿಟಮಿನ್ ಎ ಜೊತೆಗೆ ವಿಟಮಿನ್ ಸಿ ಕೂಡ ಇದರಲ್ಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...