ವಯಸ್ಸು 35 ಆದ್ರೂ ಅನೇಕರಿಗೆ ಮದುವೆಯಾಗಿರುವುದಿಲ್ಲ. ವಯಸ್ಸು ಹೆಚ್ಚಾದ್ರೂ ಇನ್ನೂ ಮದುವೆಯಾಗದವರ ಪರಿಸ್ಥಿತಿ ಹೇಗಿರುತ್ತೆ ಎನ್ನುವ ಬಗ್ಗೆ ಸರ್ವೆಯೊಂದು ನಡೆದಿತ್ತು. ಸರ್ವೆಯಲ್ಲಿ 35-40 ವರ್ಷದ ಅವಿವಾಹಿತ ಮಹಿಳೆ ಹಾಗೂ ಪುರುಷರು ಪಾಲ್ಗೊಂಡಿದ್ದರು. ಸರ್ವೆಯಲ್ಲಿ ಮನಶಾಸ್ತ್ರಜ್ಞರ ಅಭಿಪ್ರಾಯವನ್ನು ಪರಿಗಣಿಸಲಾಗಿದೆ. ಸರ್ವೆಯಲ್ಲಿ ಪಾಲ್ಗೊಂಡಿದ್ದ ಅವಿವಾಹಿತರು ಅವ್ರ ಜೀವನದಲ್ಲಾದ ಬದಲಾವಣೆಯನ್ನು ಹೇಳಿದ್ದಾರೆ.
ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ವಿದ್ಯಾಭ್ಯಾಸ, ವೃತ್ತಿಗೆ ಮೊದಲ ಆದ್ಯತೆ ನೀಡುವುದಾಗಿ ಹೇಳಿದ್ದಾರೆ. ಮದುವೆಗೆ ಎರಡನೇ ಆದ್ಯತೆ ನೀಡಿದ್ದಾರೆ. ಕೆಲ ಮಹಿಳೆಯರು ಸುಖ ಜೀವನಕ್ಕೆ ಪುರುಷನ ಅಗತ್ಯವಿಲ್ಲ ಎಂದಿದ್ದಾರೆ. ವಯಸ್ಸು 35 ದಾಟುತ್ತಿದ್ದಂತೆ ಶರೀರ ಹಾಗೂ ಮನಸ್ಸು ಎರಡರಲ್ಲೂ ಸಾಕಷ್ಟು ಬದಲಾವಣೆಯಾಗುತ್ತದೆ. 35 ವರ್ಷ ಏಕಾಂಗಿಯಾಗಿ ವಾಸವಾಗಿರುವವರಿಗೆ ಅದು ಅಭ್ಯಾಸವಾಗುತ್ತದೆ. ವಿವಾಹಿತರ ಜೀವನ ಸಮಸ್ಯೆ, ಜಗಳ ನೋಡಿ ನಾವೇ ಬೆಸ್ಟ್ ಎಂದುಕೊಳ್ಳಲು ಶುರುಮಾಡುತ್ತಾರೆ.
ಮದುವೆ ಸಂತೋಷ ನೀಡುತ್ತದೆ ನಿಜ. ಜೊತೆಗೆ ಒತ್ತಡ, ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ವೈಯಕ್ತಿಕ ಜೀವನದಲ್ಲಿ ಇನ್ನೊಬ್ಬರ ಪ್ರವೇಶವಾಗುತ್ತದೆ. ಸ್ವತಂತ್ರವಾಗಿದ್ದವರು ಆಲೋಚಿಸಿ, ಸಂಗಾತಿ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇದೆಲ್ಲವನ್ನು 35ರ ನಂತ್ರ ಪುರುಷನಿರಲಿ, ಮಹಿಳೆಯಿರಲಿ ಒಪ್ಪಿಕೊಳ್ಳಲು ಮನಸ್ಸು ಮಾಡುವುದಿಲ್ಲ. ಹೊಸ ಜವಾಬ್ದಾರಿ ಹೊಣೆಯಿಂದ ನುಣುಚಿಕೊಳ್ಳಲು ಯತ್ನಿಸುತ್ತಾರೆ. ಬಹುತೇಕರು 35ರ ನಂತ್ರ ಮದುವೆಯಾಗುವ ಬದಲು ಒಂಟಿಯಾಗಿಯೇ ಜೀವನ ಮುಂದುವರೆಸಲು ಬಯಸುತ್ತಾರೆಂದು ಸರ್ವೆಯಲ್ಲಿ ಹೇಳಲಾಗಿದೆ.