ಸಾವಿನ ನಿಶ್ಚಿತ ಎಂಬುದು ಎಲ್ಲರಿಗೂ ತಿಳಿದಿದೆ. ಆದ್ರೆ ಸಾವಿನ ನಂತ್ರ ಜನರು ಏನಾಗ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ. ಸ್ವರ್ಗ, ನರಕ ಎಂಬುದಿದೆಯಾ ? ಸಾವಿನ ನಂತ್ರ ಏನಾಗುತ್ತೆ ? ದೇಹದಲ್ಲಿ ಆತ್ಮ ಬೇರ್ಪಡುತ್ತಾ ಎಂಬೆಲ್ಲ ಪ್ರಶ್ನೆಗಳು ಏಳುತ್ತವೆ. ಸತ್ತು ಮತ್ತೆ ಬದುಕಿ ಬಂದ ವ್ಯಕ್ತಿ ತನ್ನ ಅನುಭವ ಹಂಚಿಕೊಂಡರೆ ?
60 ವರ್ಷದ ಸ್ಕಾಟ್ ಡ್ರಮ್ಮಂಡ್ ಸಾವಿನ ಬಗ್ಗೆ ಹೇಳಿದ್ದಾನೆ. 28 ವರ್ಷದವರಾಗಿದ್ದಾಗ ನಾನು ಸಾವನ್ನಪ್ಪಿದ್ದೆ. ಕೇವಲ 20 ನಿಮಿಷಗಳ ನಂತ್ರ ಮತ್ತೆ ಬದುಕಿ ಬಂದೆ. ಸಾವನ್ನಪ್ಪಿದ 20 ನಿಮಿಷಗಳ ನಂತರ ಆತ್ಮವು ದೇಹಕ್ಕೆ ಮರಳಿತು ಎಂದು ಸ್ಕಾಟ್ ಡ್ರಮ್ಮಂಡ್ ಹೇಳಿಕೊಂಡಿದ್ದಾನೆ.
28 ವರ್ಷದಲ್ಲಿದ್ದಾಗ ಸ್ಕಾಟ್ ಅಪಘಾತಕ್ಕೀಡಾಗಿದ್ದನಂತೆ. ಕೈ ಹೆಬ್ಬೆರಳು ಮುರಿದಿತ್ತಂತೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಸ್ಕಾಟ್ ಗೆ ನೆನಪಿದೆಯಂತೆ. ಆದ್ರೆ ನಂತ್ರ 20 ನಿಮಿಷ ಸ್ಕಾಟ್ ಬೇರೆ ಪ್ರಪಂಚಕ್ಕೆ ಹೋಗಿದ್ದನಂತೆ. ಅಲ್ಲಿ ದೇವರು ನಿನ್ನ ಸಮಯ ಇನ್ನೂ ಬಂದಿಲ್ಲವೆನ್ನುತ್ತ ವಾಪಸ್ ಕಳುಹಿಸಿದ್ದನಂತೆ.
ನರ್ಸ್ ತನ್ನ ಸಾವಿನ ಬಗ್ಗೆ ಹೇಳ್ತಿದ್ದಂತೆ ಅವನ ಪಕ್ಕದಲ್ಲಿದ್ದ ಯಾವುದೋ ಅದೃಶ್ಯ ಶಕ್ತಿ ಸುಂದರ ಮೈದಾನಕ್ಕೆ ಕರೆದುಕೊಂಡು ಹೋಗಿತ್ತಂತೆ. ಮೈದಾನದಲ್ಲಿ ಸುಂದರವಾದ ಮತ್ತು ವರ್ಣಮಯ ಹೂವುಗಳು ಇದ್ದವಂತೆ. ನಯವಾದ ಹುಲ್ಲು ಬೆಳೆದಿತ್ತಂತೆ. ಬಿಳಿ ಮೋಡಗಳು ಮುತ್ತಿಟ್ಟಿದ್ದವಂತೆ. ಎಡಭಾಗದಲ್ಲಿ ತುಂಬಾ ಎತ್ತರದ ಮತ್ತು ಸುಂದರವಾದ ಮರಗಳು ಬೆಳೆದಿದ್ದವಂತೆ. ಎಲ್ಲಕ್ಕಿಂತ ಮುಖ್ಯವಾಗಿ ಜಗತ್ತಿನಲ್ಲಿ ಎಲ್ಲೂ ಇರದ ಶಾಂತಿ ಅಲ್ಲಿತ್ತಂತೆ.
ಅದೃಶ್ಯ ಶಕ್ತಿ ಹಿಂದೆ ಹೋಗ್ತಿದ್ದ ಸ್ಕಾಟ್ ನ ಕೈ ಹಿಡಿದ ಯಾರೋ ಒಬ್ಬರು, ಇನ್ನೂ ನಿನ್ನ ಸಮಯ ಬಂದಿಲ್ಲ. ನೀನು ಮಾಡುವುದು ಇನ್ನೂ ಇದೆ ಎಂದು ಹೇಳಿದರಂತೆ. ಈ ಮಾತಿನ ನಂತ್ರ ಆತ್ಮ ದೇಹಕ್ಕೆ ವಾಪಸ್ ಆಯ್ತು ಎಂದು ಸ್ಕಾಟ್ ಹೇಳುತ್ತಾರೆ. ಈ ಘಟನೆ ನಂತ್ರ ಜೀವನದ ದೃಷ್ಟಿಕೋನ ಬದಲಾಯ್ತು ಎಂದು ಸ್ಕಾಟ್ ಹೇಳಿದ್ದಾನೆ.