
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ರವಿಶಾಸ್ತ್ರಿ ಅವರನ್ನು ಕೋಚ್ ಹುದ್ದೆಯಿಂದ ಹೊರಹಾಕಿದರು ಎಂದು ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಕೆಲವೊಂದು ಸೆನ್ಸೇಷನಲ್ ಹೇಳಿಕೆಗಳನ್ನು ಕೊಟ್ಟಿದ್ದಾರೆ.
ಯೂಟ್ಯೂಬ್ನಲ್ಲಿರುವ ತಮ್ಮ ಚಾನೆಲ್ ’ಕಾಟ್ ಬಿಹೈಂಡ್’ನಲ್ಲಿ ಈ ಬಗ್ಗೆ ಮತ್ತಷ್ಟು ವಿವರಿಸುತ್ತಾ, “2017 ರಲ್ಲಿ ಶಾಸ್ತ್ರಿ ಕೋಚ್ ಆಗಿ ಹೊರನಡೆದ ನಂತರ ಇದರ ಬೀಜಗಳನ್ನು ಬಿತ್ತಲಾಯಿತು. ಅಂದರೆ ಅನಿಲ್ ಕುಂಬ್ಳೆ ಆಗ ಹುದ್ದೆಯಿಂದ ಕೆಳಗಿಳಿಯಬೇಕಾಯಿತು,” ಎಂದು ಹೇಳಿದ್ದಾರೆ. 2019 ರ ವಿಶ್ವಕಪ್ ನಂತರ ಶಾಸ್ತ್ರಿ ಅವರ ಒಪ್ಪಂದವು ಮುಕ್ತಾಯಗೊಂಡಿತ್ತು. ಆದರೆ ಆ ವೇಳೆ ಅವರಿಗೆ ಕೋಚ್ ಹುದ್ದೆಯಲ್ಲಿ ಎರಡು ವರ್ಷಗಳ ಮಟ್ಟಿಗೆ ವಿಸ್ತರಣೆ ಕೊಡಲಾಯಿತು. ಗಂಗೂಲಿ ಖುದ್ದು ಶಾಸ್ತ್ರಿಗೆ: ‘ಬಾಸ್ ಇದು ಹೋಗಲು ಸಮಯ,’ ಎಂದು ಹೇಳಿರುವುದಾಗಿ ಲತೀಫ್ ನೇರವಾಗಿ ಆಪಾದನೆ ಮಾಡಿದ್ದಾರೆ.
“ಅನಿಲ್ ಕುಂಬ್ಳೆಯನ್ನು ಕೋಚ್ ಹುದ್ದೆಯಿಂದ ತಪ್ಪಾಗಿ ತೆಗೆದುಹಾಕಿದಾಗ ಇದೆಲ್ಲವೂ ಪ್ರಾರಂಭವಾಯಿತು. ರವಿಶಾಸ್ತ್ರಿ ಕೋಚಿಂಗ್ನ ಯಾವುದೇ ಕೋರ್ಸ್ಗಳನ್ನು ತೆಗೆದುಕೊಂಡಿರಲಿಲ್ಲ ಮತ್ತು ಅವರು ನೇರವಾಗಿ ಕೋಚ್ ಆಗಿ ಪ್ರವೇಶ ಪಡೆದರು. ಟೆಸ್ಟ್ ಕ್ರಿಕೆಟ್ನಲ್ಲಿ ಅನಿಲ್ ಕುಂಬ್ಳೆ 600ಕ್ಕೂ ಹೆಚ್ಚು ವಿಕೆಟ್ಗಳನ್ನು ಪಡೆದಿದ್ದಾರೆ ಮತ್ತು ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಅವರ ಸಹ ಆಟಗಾರರಾಗಿದ್ದು ಈ ಮೂವರದ್ದು ಒಂದು ಪ್ರಬಲ ಗುಂಪು. ಈ ಮೂವರು ತುಂಬಾ ಸ್ಟ್ರಾಂಗ್ ಆಗಿದ್ದಾರೆ,” ಎಂದು ಲತೀಫ್ ಯೂಟ್ಯೂಬ್ ವಿಡಿಯೋದಲ್ಲಿ ಹೇಳಿದ್ದಾರೆ.
“ಎಲ್ಲಾ ರೀತಿಯಿಂದಲೂ, ಗಂಗೂಲಿ ಶಾಸ್ತ್ರಿ ಅವರಿಗೆ ‘ಬಾಸ್, ಇದು ಹೋಗಲು ಸಮಯ’ ಎಂದಿದ್ದು, ಶಾಸ್ತ್ರಿ ಅವರು ಕೋಚ್ ಆಗಿ ಮುಂದುವರಿಯಲು ಯೋಚಿಸಿದ್ದರೂ ಸಹ ಹೀಗೆ ಹೇಳಿದ್ದಾರೆ. ಟಿ 20 ವಿಶ್ವಕಪ್ಗೆ ಮೊದಲಿನಿಂದಲೇ ಈ ಬೆಳವಣಿಗೆ ಆಗುತ್ತಾ ಬಂದಿದೆ. ಇದು ಭಾರತೀಯ ಕ್ರಿಕೆಟ್ನ ಮೇಲೆ ಪರಿಣಾಮ ಬೀರಿದೆ. 1990 ರ ದಶಕದ ಆರಂಭದಲ್ಲಿ ಪಾಕಿಸ್ತಾನದೊಂದಿಗೆ ಏನಾಯಿತೋ ಇಂದು ಭಾರತೀಯ ಕ್ರಿಕೆಟ್ನಲ್ಲಿ ಆಗುತ್ತಿದೆ, ”ಎಂದು ಪಾಕಿಸ್ತಾನದ ಮಾಜಿ ವಿಕೆಟ್ಕೀಪರ್ ಬ್ಯಾಟರ್ ಸೇರಿಸಿದ್ದಾರೆ.
ಕೊನೆಯಲ್ಲಿ, ಐಸಿಸಿ ಟಿ 20 ವಿಶ್ವಕಪ್ ಮತ್ತು ನಂತರ ದಕ್ಷಿಣ ಆಫ್ರಿಕಾದಲ್ಲಿ ಭಾರತ ಕಳಪೆ ಪ್ರದರ್ಶನ ನೀಡುವಲ್ಲಿ ಮೈದಾನದ ಹೊರಗಿನ ವಿವಾದಗಳು ಪಾತ್ರ ವಹಿಸಿವೆ ಎಂದು ಲತೀಫ್ ಹೇಳಿದರು. ತನ್ನ ದೇಶಬಾಂಧವ ಡ್ಯಾನಿಶ್ ಕನೇರಿಯಾ ಅವರಂತೆಯೇ, ಕೊಹ್ಲಿ ಮತ್ತು ಕೆ.ಎಲ್. ರಾಹುಲ್ರನ್ನು ಪ್ರತ್ಯೇಕಿಸಿ ತಂಡವನ್ನು ಹೇಗೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ.
“ಮೈದಾನದ ಹೊರಗಿನ ಇಂತಹ ಉದ್ವಿಗ್ನತೆಗಳು ತಂಡದ ಪ್ರದರ್ಶನಗಳಿಗೆ ಅಡಚಣೆಯುಂಟು ಮಾಡುತ್ತವೆ. ಕೊಹ್ಲಿ ಜೊತೆ ಕುಳಿತಿದ್ದವರು ಯಾರು ? ಸಿರಾಜ್, ಎಡಭಾಗದಲ್ಲಿ. ಅವನ ಬಲಭಾಗದಲ್ಲಿ, ಯಾರಿಗೂ ಗೊತ್ತಿಲ್ಲದ ಆಟಗಾರರಿದ್ದರು. ಆ ಚಿತ್ರವು ಎಲ್ಲವನ್ನೂ ಹೇಳುತ್ತಿತ್ತು. ಕೆ.ಎಲ್. ರಾಹುಲ್ ತಂಡವನ್ನು ನಿಭಾಯಿಸಲು ಸಾಧ್ಯವಿಲ್ಲ, ಮತ್ತು ರೋಹಿತ್ ಶರ್ಮಾ ಅವರು ಭಾರತೀಯ ಕ್ರಿಕೆಟ್ಗೆ ಭವಿಷ್ಯವನ್ನು ತರುವ ವ್ಯಕ್ತಿಯಾಗಬೇಕಾದರೆ ತಮ್ಮ ಫಿಟ್ನೆಸ್ ಅನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ಮೊದಲು ಕಲಿಯಬೇಕಿದೆ, ”ಎಂದು ಲತೀಫ್ ಹೇಳಿದ್ದಾರೆ.