ಬಾಲಿವುಡ್ ನಟ, ಬಿಗ್ಬಾಸ್-13 ವಿಜೇತ ಸಿದ್ಧಾರ್ಥ ಶುಕ್ಲಾ ಅವರು ಸೆ.2ರ ತಡರಾತ್ರಿ ತೀವ್ರತರವಾದ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆದರೆ 40 ವಯಸ್ಸಿನ ಫಿಟ್ ಆ್ಯಂಡ್ ಫೈನ್ ಆಗಿದ್ದ ಸಿದ್ಧಾರ್ಥ್ಗೆ ಹೃದಯಾಘಾತ ಸಂಭವಿಸುವ ಮಾದರಿಯಲ್ಲಿ ಘಟನೆಗಳು ಏನು ನಡೆದಿದ್ದವು ಎನ್ನುವುದರ ಹಿಂದೆ ಸದ್ಯ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ತಡರಾತ್ರಿ 3 ಗಂಟೆ ಸುಮಾರಿಗೆ ಸಿದ್ಧಾರ್ಥ್ಗೆ ಏಕಾಏಕಿ ಎಚ್ಚರವಾಗಿದೆ. ದೇಹದಲ್ಲಿ ಏನೋ ಒಂದು ತರಹದ ಹಿಂಸೆ ಆಗುತ್ತಿರುವಂತೆ ಒದ್ದಾಡಿದ್ದಾರೆ. ಎದೆಯಲ್ಲಿ ಏನೋ ಒತ್ತಿದಂತೆ ಆಗುತ್ತಿದೆ ಎಂದಿದ್ದಾರೆ. ತಾಯಿಗೆ ಈ ವಿಚಾರ ಗೊತ್ತಾಗಿ, ಸ್ವಲ್ಪ ನೀರು ಕೊಟ್ಟು ಸಮಾಧಾನಪಡಿಸಿ ಮಲಗಿಸಿದ್ದಾರೆ. ಆದರೆ ಬೆಳಗ್ಗೆ ತಾಯಿಯೇ ಎಬ್ಬಿಸಿದರೂ ಸಿದ್ಧಾರ್ಥ್ ಎದ್ದೇಳಲೇ ಇಲ್ಲ.
SHOCKING; ʼಕೊರೊನಾʼ ಲಸಿಕೆಗೆ ಹೆದರಿ ಊರು ತೊರೆದ ಜನ….!
ಗಾಬರಿಗೊಂಡ ತಾಯಿ ಸಿದ್ಧಾರ್ಥ್ನ ಸೋದರಿಗೆ ಕರೆ ಮಾಡಿ, ಬಳಿಕ ಅವರು ಕೂಪರ್ ಆಸ್ಪತ್ರೆಯ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಸಂಬಂಧಿಕರು ಕೂಡ ಆಸ್ಪತ್ರೆಗೆ ದೌಡಾಯಿಸಿ, ವೈದ್ಯರಿಗೆ ಸಿದ್ಧಾರ್ಥ್ ದೇಹಸ್ಥಿತಿ ಬಗ್ಗೆ ಪದೇಪದೆ ವಿಚಾರಿಸಿದ್ದಾರೆ. ಆದರೆ, ವೈದ್ಯರು ಮೂರು ಬಾರಿ ತಪಾಸಣೆ ನಡೆಸಿದಾಗಲೂ ಸಿದ್ಧಾರ್ಥ್ ದೇಹದಲ್ಲಿ ನಾಡಿಮಿಡಿತ ಸಿಕ್ಕಿಲ್ಲ. ಹೃದಯದ ಬಡಿತ ಕೂಡ ನಿಂತು ಬಹಳ ಸಮಯವಾದಂತೆ ಭಾಸವಾಗಿದೆ. ಬೆಳಗ್ಗೆ 10.15ಕ್ಕೆ ವೈದ್ಯರು ಸಿದ್ಧಾರ್ಥ್ ಸತ್ತಿದ್ದಾರೆ ಎಂದು ಘೋಷಿಸಿದ್ದಾರೆ.